ADVERTISEMENT

ಉತ್ತರ ಪ್ರದೇಶ: 10 ಅಕ್ರಮ ಮದರಸಾಗಳನ್ನು ಮುಚ್ಚಿದ ಆಡಳಿತ

ಪಿಟಿಐ
Published 27 ಏಪ್ರಿಲ್ 2025, 6:17 IST
Last Updated 27 ಏಪ್ರಿಲ್ 2025, 6:17 IST
<div class="paragraphs"><p>ಬೀಗ (ಸಾಂದರ್ಭಿಕಚಿತ್ರ)</p></div>

ಬೀಗ (ಸಾಂದರ್ಭಿಕಚಿತ್ರ)

   

–ಗೆಟ್ಟಿ ಚಿತ್ರ

ಶ್ರಾವಸ್ತಿ (ಉತ್ತರ ಪ್ರದೇಶ): ಶ್ರಾವಸ್ತಿ ಜಿಲ್ಲೆಯಲ್ಲಿ ನೇಪಾಳ ಗಡಿಯಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ 10 ಮಾನ್ಯತೆ ಪಡೆಯದ ಮದರಸಾಗಳನ್ನು ಜಿಲ್ಲಾಡಳಿತ ಮುಚ್ಚಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ADVERTISEMENT

‘ಶ್ರಾವಸ್ತಿಯಲ್ಲಿ ಒಟ್ಟು 297 ಮದರಸಾಗಳಿವೆ. ಅವುಗಳಲ್ಲಿ 192 ಮಾನ್ಯತೆ ಪಡೆಯದವು. ಶನಿವಾರ, ನೇಪಾಳ ಗಡಿಯಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಭಾರತೀಯ ಭೂಪ್ರದೇಶಕ್ಕೆ ಸೇರಿರುವ 10 ಮದರಸಾಗಳನ್ನು ಮುಚ್ಚಲಾಗಿದೆ. ಇವುಗಳಲ್ಲಿ ಹೆಚ್ಚಿನವು ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದ್ದವು, ಕೆಲವು ಬಾಡಿಗೆ ಮನೆಗಳು ಅಥವಾ ಮನೆಗಳಲ್ಲಿ ಮತ್ತು ಕೆಲವು ಅರೆ-ನಿರ್ಮಿತ ಕಟ್ಟಡಗಳಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ದೇವೇಂದ್ರ ರಾಮ್ ಮಾಹಿತಿ ನೀಡಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಅಜಯ್ ಕುಮಾರ್ ದ್ವಿವೇದಿ ಅವರ ಸೂಚನೆಯ ಮೇರೆಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಮತ್ತು ಮಾನ್ಯತೆ ಪಡೆಯದ ಮದರಸಾಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ (ಮಾಹಿತಿ ಇಲಾಖೆಯಿಂದ) ಹೊರಡಿಸಲಾದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.