ನವದೆಹಲಿ : ಗೃಹ ಇಲಾಖೆಗೆ ಬಜೆಟ್ನಲ್ಲಿ ಮೀಸಲಿಟ್ಟ ಅನುದಾನ ಇದೇ ಮೊದಲ ಬಾರಿಗೆ ₹1 ಲಕ್ಷ ಕೋಟಿ ದಾಟಿದೆ.
ಪೊಲೀಸ್ ಪಡೆಗಳು ಮತ್ತು ಗಡಿ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಪ್ರಸಕ್ತ ಸಾಲಿನ ಬಜೆಟ್ನಲ್ಲಿ ₹1,03,927 ಕೋಟಿ ಅನುದಾನವನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇ 4.9ರಷ್ಟು ಹೆಚ್ಚು ಅನುದಾನ ಗೃಹ ಇಲಾಖೆಗೆ ಸಿಕ್ಕಿದೆ.
ದೆಹಲಿ ಪೊಲೀಸ್ ಇಲಾಖೆಗೆ ₹7,496.91 ಕೋಟಿ ಅನುದಾನ ನೀಡಲಾಗಿದೆ. ಪಾಕಿಸ್ಥಾನ, ಚೀನಾ ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹2,000 ಕೋಟಿ ಅನುದಾನ ಮೀಸಲಿಡಲಾಗಿದೆ. ಇದಲ್ಲದೇ , ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಆಂತರಿಕ ಭದ್ರತೆ ಕಾಪಾಡಲು ನಿಯೋಜಿತಗೊಂಡಿರುವ ಕೇಂದ್ರೀಯ ಪೊಲೀಸ್ ಪಡೆಗೆ ₹23,742.04 ಕೋಟಿ ಮೀಸಲಿಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.