ADVERTISEMENT

ಬಜೆಟ್ ಇರುವುದು ಇಡೀ ದೇಶಕ್ಕಾಗಿ, ಚುನಾವಣೆಗೋಸ್ಕರವಲ್ಲ: ಉದ್ಧವ್ ಠಾಕ್ರೆ ಕಿಡಿ

ಏಜೆನ್ಸೀಸ್
Published 2 ಫೆಬ್ರುವರಿ 2021, 7:20 IST
Last Updated 2 ಫೆಬ್ರುವರಿ 2021, 7:20 IST
   

ಮುಂಬೈ: ಕೇಂದ್ರ ಬಜೆಟ್–2021ರ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಜೆಟ್‌ನಲ್ಲಿ ಇಡೀ ದೇಶದ ಬದಲಾಗಿ, ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯಗಳನ್ನು ಮಾತ್ರವೇ ಗಮನಹರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಮಂಡಿಸಿದ ಬಜೆಟ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬಜೆಟ್‌ ಇಡೀ ದೇಶಕ್ಕಾಗಿ ಇರಬೇಕು. ಕೇವಲ ಚುನಾವಣೆಗಳಿಗಾಗಿ ಅಲ್ಲ. ಇದು ದೇಶದ ಬಜೆಟ್‌, ಚುನಾವಣೆಯದ್ದಲ್ಲ’ ಎಂದು ಕಿಡಿಕಾರಿದ್ದಾರೆ.

ಇಡೀ ದೇಶದ ಗಮನ ಬಜೆಟ್‌ ಮೇಲಿರುತ್ತದೆ. ಎಲ್ಲ ಭಾಗದ ಜನರೂ ತಮ್ಮದೇ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಮುಂಬರುವ ವಿಧಾನಸಭಾ ಚುನಾವಣೆಗಳ ಮೇಲೆ ಮಾತ್ರ ಕಣ್ಣಿಟ್ಟು, ಬಜೆಟ್‌ ರೂಪಿಸಿದರೆ ಇಡೀ ದೇಶದ ಜನರ ನಿರೀಕ್ಷೆಗಳು ಪೂರೈಕೆಯಾಗುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಚುನಾವಣೆ ಸಮೀಪದಲ್ಲಿರುವ ರಾಜ್ಯಗಳಿಗೆ ಮಾತ್ರವೇ ಹೆಚ್ಚಿನ ಅನುಧಾನ ನೀಡಲಾಗಿದೆ ಎಂದು ವಿರೋಧ ಪಕ್ಷಗಳ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಸೀತಾರಾಮನ್‌ ಅವರು, ಚಹಾ ಕಾರ್ಮಿಕರ ಕಲ್ಯಾಣಕ್ಕಾಗಿ ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಕಾರ್ಮಿಕರು, ಅವರ ಮಕ್ಕಳಿಗಾಗಿ ವಿಶೇಷ ಯೋಜನೆಯಲ್ಲಿ ₹ 1 ಸಾವಿರ ಕೋಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.