ADVERTISEMENT

ಭಾರತ ಮೊದಲು, ಜನ ಮೊದಲು ಎನ್ನುವುದೇ ನಮ್ಮ ಕೆಲಸದ ಸಂಸ್ಕೃತಿ: ಪ್ರಧಾನಿ ಮೋದಿ

ವಿಪಕ್ಷಗಳು ಬಜೆಟನ್ನು ಅಧ್ಯಯನ ಮಾಡಿ ಅಭಿಪ್ರಾಯ ವ್ಯಕ್ತಪಡಿಸುತ್ತವೆ ಎನ್ನುವ ನಿರೀಕ್ಷೆ ನನ್ನದು ಎಂದ ಪ್ರಧಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜನವರಿ 2023, 10:29 IST
Last Updated 31 ಜನವರಿ 2023, 10:29 IST
   

ನವದೆಹಲಿ: ‘ಭಾರತ ಮೊದಲು, ಜನ ಮೊದಲು‘ ಎನ್ನುವುದೇ ನಮ್ಮ ಕೆಲಸದ ಸಂಸ್ಕೃತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಲ್ಲಿ ಮಾತನಾಡಿದ ಅವರು, ‘ ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರದ್ದು, ಒಂದೇ ಧ್ಯೇಯವಾಕ್ಯ, ಒಂದೇ ಗುರಿ. ನಮ್ಮ ಕೆಲಸದ ಸಂಸ್ಕೃತಿಯು ಭಾರತ ಮೊದಲು ಜನರು ಮೊದಲು ಎನ್ನುವುದಾಗಿದೆ. ಇದೇ ಸ್ಪೂರ್ತಿಯೊಂದಿಗೆ ನಾವು ಬಜೆಟ್‌ ಅಧಿವೇಶನದಲ್ಲೂ ಚರ್ಚೆ ಮಾಡುತ್ತೇವೆ. ಎಲ್ಲಾ ವಿರೋಧ ಪಕ್ಷಗಳು ಬಜೆಟ್‌ ಅನ್ನು ಅಧ್ಯಯನ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತವೆ ಎನ್ನುವ ಅಭಿಲಾಷೆ ನನ್ನದು‘ ಎಂದು ಅವರು ಹೇಳಿದರು.

ದೀರ್ಘಾವಧಿಗೆ ದೇಶಕ್ಕೆ ಉಪಯೋಗವಾಗುವಂತಹ ನೀತಿ ನಿರ್ಣಯ ಚರ್ಚೆಗಳು ಕಲಾಪದಲ್ಲಿ ನಡೆಯಲಿದೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

ADVERTISEMENT

ಫೆ. 1 ರಂದು ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಇಂದು (ಜನವರಿ 31) ಲೋಕಸಭೆಯಲ್ಲಿ 2022–23ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.