ಅಮಿತ್ ಶಾ
–ಪಿಟಿಐ ಚಿತ್ರ
ಅಮರಾವತಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಂಧ್ರಪ್ರದೇಶದ ಬೆಳವಣಿಗೆಗೆ ಸಹಕಾರ ನೀಡುತ್ತಿದ್ದು, ಆರು ತಿಂಗಳಲ್ಲೇ ₹3 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿ ಹೇಳಿದರು.
ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ (ಎನ್‌ಐಡಿಎಂ) ದಕ್ಷಿಣ ವಲಯದ ಕ್ಯಾಂಪಸ್ ಹಾಗೂ ಎನ್‌ಡಿಆರ್‌ಎಫ್‌ನ 10ನೇ ಬೆಟಾಲಿಯನ್‌ನ ಕ್ಯಾಂಪಸ್ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು.
ಹುಡ್ಕೊ ಮತ್ತು ವಿಶ್ವಬ್ಯಾಂಕ್ ಮೂಲಕ ಅಮರಾವತಿ ನಗರದ ಅಭಿವೃದ್ಧಿಗೆ ₹27 ಸಾವಿರ ಕೋಟಿ ನೆರವು ಕಲ್ಪಿಸಲು ಪ್ರಧಾನಿ ಕ್ರಮವಹಿಸಿದ್ದಾರೆ ಎಂದು ಶಾ ಹೇಳಿದರು.
ಹಿಂದಿನ ಸರ್ಕಾರದ ಕಾರ್ಯವೈಖರಿ ಟೀಕಿಸುತ್ತಾ, ‘ಐದು ವರ್ಷ ಪೋಲು ಮಾಡಿದೆವು ಎಂದು ಜನರು ಬೇಸರ ಮಾಡಿಕೊಳ್ಳಬಾರದು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇನ್ನು ರಾಜ್ಯದ ಸಮಗ್ರ ಅಭಿವೃದ್ಧಿಗೆ ವೇಗ ನೀಡುವರು’ ಎಂದೂ ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.