ADVERTISEMENT

ಮುಂಬೈ ಪಾಲಿಕೆ ನೋಟಿಸ್‌ ವಿರುದ್ಧ ಹೈಕೋರ್ಟ್‌ ಮೊರೆ ಹೋದ ಕೇಂದ್ರ ಸಚಿವ

ಪಿಟಿಐ
Published 21 ಮಾರ್ಚ್ 2022, 11:15 IST
Last Updated 21 ಮಾರ್ಚ್ 2022, 11:15 IST
ನಾರಾಯಣ್‌ ರಾಣೆ
ನಾರಾಯಣ್‌ ರಾಣೆ   

ಮುಂಬೈ: ಇಲ್ಲಿನ ಜುಹುನಲ್ಲಿರುವ ಬಂಗಲೆಗೆ ಅನಧಿಕೃತಮಾರ್ಪಾಡು ಮಾಡಿರುವ ಆರೋಪದ ಮೇಲೆ ಬೃಹನ್‌ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ನೀಡಿದ ನೋಟಿಸ್‌ ವಿರುದ್ಧ ಕೇಂದ್ರ ಸಚಿವ ನಾರಾಯಣ ರಾಣೆ ಸೋಮವಾರ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ನ್ಯಾಯಮೂರ್ತಿ ಎ.ಎ.ಸಯ್ಯದ್‌ ಅವರಿದ್ದ ವಿಭಾಗೀಯ ಪೀಠವನ್ನು ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ರಾಣೆ ಪರ ವಕೀಲ ಅಮೋಘ್ ಸಿಂಗ್‌ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಮಂಗಳವಾರ ವಿಚಾರಣೆ ನಡೆಸುವುದಾಗಿ ತಿಳಿಸಿತು.

ಬಂಗಲೆಯನ್ನು ಅನಧಿಕೃತವಾಗಿ ಮಾರ್ಪಾಡು ಮಾಡಲಾಗಿದೆ ಎಂದು ಬಿಎಂಸಿ ಸಂಸದ ನಾರಾಯಣ್‌ ರಾಣೆ ಮತ್ತು ಅವರ ಕುಟುಂಬಕ್ಕೆ ಮೂರು ಬಾರಿ ನೋಟಿಸ್‌ ನೀಡಿತ್ತು. ತಮಗೆ ಮತ್ತು ತಮ್ಮ ಕುಟುಂಬಕ್ಕೆ ನೀಡಿದ್ದ ನೋಟಿಸ್‌ ಅನ್ನು ರದ್ದುಗೊಳಿಸುವಂತೆ ಬಿಎಂಸಿಗೆ ರಾಣೆ ಕೋರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.