ADVERTISEMENT

ಕೇರಳ: ಕೋವಿಡ್‌ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಏಕರೂಪದ ದರ

ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

ಪಿಟಿಐ
Published 10 ಮೇ 2021, 14:37 IST
Last Updated 10 ಮೇ 2021, 14:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೊಚ್ಚಿ: ‘ಕೋವಿಡ್‌ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಏಕರೂಪದ ಹಾಗೂ ಕೈಗೆಟುಕುವ ದರವನ್ನು ನಿಗದಿಪಡಿಸಲಾಗಿದೆ’ ಎಂದು ಕೇರಳ ಸರ್ಕಾರ ಸೋಮವಾರ ರಾಜ್ಯ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳಲ್ಲಿ ದುಬಾರಿ ದರ ವಿಧಿಸಲಾಗುತ್ತಿದ್ದು, ಜನರನ್ನು ಶೋಷಿಸಲಾಗುತ್ತಿವೆ ಎಂದು ಕೇರಳ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದ ಹಿಂದೆಯೇ ಸರ್ಕಾರ ಈ ಕ್ರಮಕೈಗೊಂಡಿದೆ. ಅರ್ಜಿ ಸಲ್ಲಿಸಿದ್ದ ವಕೀಲರೊಬ್ಬರು, ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದ್ದರು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು, ‘ಸರ್ಕಾರದ ಆದೇಶದ ಪ್ರಕಾರ ಜನರಲ್‌ ವಾರ್ಡ್‌ಗೆ ದಿನಕ್ಕೆ ₹ 2,645 ನಿಗದಿಪಡಿಸಲಾಗಿದೆ. ಇದರಲ್ಲಿ ನೋಂದಣಿ, ಹಾಸಿಗೆ, ನರ್ಸಿಂಗ್ ಮತ್ತು ರಕ್ತ ಪರೀಕ್ಷೆ, ಆಮ್ಲಜನಕ, ಎಕ್ಸ್‌ರೇ, ವೈದ್ಯರ ಸಮಾಲೋಚನೆ, ಡಯಾಗ್ನೋಸ್ಟಿಕ್‌ ಸೇವೆಯೂ ಒಳಗೊಂಡಿದೆ‘ ಎಂದು ತಿಳಿಸಿದರು.

ADVERTISEMENT

ಇದರ ಹೊರತಾಗಿ ಪಿಪಿಇ ಕಿಟ್‌, ಪಲ್ಸ್‌ ಆಕ್ಸಿಮೀಟರ್, ಮಾಸ್ಕ್, ಚಿಕ್ಕದಾದ ಆಮ್ಲಜನಕ ಸಿಲಿಂಡರ್‌ಗಳಿಗೂ ಅತಿಯಾದ ದರ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನಿಯಮಾನುಸಾರ ಜಿಲ್ಲಾಧಿಕಾರಿಗಳು ಕ್ರಮತೆಗೆದು ಕೊಳ್ಳಬಹುದು. ಯಾವುದೇ ಶಾಪ್‌ಗಳು, ಆಸ್ಪತ್ರೆಗಳು ಈ ಉತ್ಪನ್ನಗಳಿಗೆ ಗರಿಷ್ಠ ಮಾರಾಟ ದರಕ್ಕಿಂತಲೂ (ಎಂಆರ್‌ಪಿ) ಅಧಿಕ ದರವನ್ನು ವಸೂಲಿ ಮಾಡುವಂತಿಲ್ಲ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.