ADVERTISEMENT

ದಲಿತ ಮಹಿಳೆಯ ಶವ ಹೊರ ತೆಗೆದ ಪ್ರಕರಣ: ತನಿಖೆಗೆ ಮಯಾವತಿ ಆಗ್ರಹ

ಪಿಟಿಐ
Published 28 ಜುಲೈ 2020, 8:31 IST
Last Updated 28 ಜುಲೈ 2020, 8:31 IST
ಮಾಯಾವತಿ
ಮಾಯಾವತಿ   

ಲಖನೌ: ಆಗ್ರಾದ ಬಳಿಯಿರುವ ರುದ್ರಭೂಮಿಯು ಮೇಲ್ಜಾತಿಗೆ ಸೇರಿದೆ ಎಂಬ ಕಾರಣಕ್ಕೆದಲಿತ ಮಹಿಳೆಯ ಶವವನ್ನು ಚಿತಾಗಾರದಿಂದ ಹೊರತೆಗೆಯಲಾಗಿದೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ಮಂಗಳವಾರ ಒತ್ತಾಯಿಸಿದ್ದಾರೆ.

‘ಮೇಲ್ಜಾತಿಗೆ ಸೇರಿದ ಕೆಲ ಜನರು ದಲಿತ ಮಹಿಳೆಯ ಶವವನ್ನು ಚಿತಾಗಾರದಿಂದ ಹೊರತೆಗೆದಿದ್ದಾರೆ. ಆ ರುದ್ರಭೂಮಿ ಮೇಲ್ಜಾತಿಗೆ ಸೇರಿದೆ ಎಂಬ ಕಾರಣಕ್ಕೆ ಈ ರೀತಿಯ ಕೃತ್ಯ ಎಸಗಿದ್ದಾರೆ. ಇದು ನಿಜಕ್ಕೂ ನಾಚಿಗೇಡಿನ ವಿಷಯ. ಇಂತಹ ನಡೆ ಖಂಡನೀಯ’ ಎಂದು ಮಾಯಾವತಿ ಟ್ವೀಟ್‌ ಮಾಡಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಈ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಬೇಕು. ಇಂತಹ ಘಟನೆಗಳು ಮುಂದೆ ನಡೆಯಬಾರದು. ಹಾಗಾಗಿಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ದೆಹಲಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಮಧ್ಯಪ್ರದೇಶದ ದಲಿತ ವೈದ್ಯರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.