
ಪಿಟಿಐ
ರಾಹುಲ್ ಗಾಂಧಿ
ಸುಲ್ತಾನ್‌ಪುರ: ರಾಹುಲ್ ಗಾಂಧಿ ಅವರು ಚಮ್ಮಾರ ದಿವಂಗತ ರಾಮ್ ಚೇತ್ ಅವರ ಅಂಗಡಿ ಮುಂದೆ ತಮ್ಮ ವಾಹನವನ್ನು ನಿಲ್ಲಿಸಿ, ರಾಮ್‌ಚೇತ್ ಅವರ ಕುಟುಂಬಸ್ಥರೊಂದಿಗೆ ಶುಕ್ರವಾರ ಮಾತುಕತೆ ನಡೆಸಿದರು.
ರಾಹುಲ್ ಗಾಂಧಿ ಅವರು 2024ರಲ್ಲಿ ಸುಲ್ತಾನ್‌ಪುರ ಮಾರ್ಗವಾಗಿ ತೆರಳುತ್ತಿದ್ದ ವೇಳೆ ರಾಮ್ ಚೇತ್ ಅಂಗಡಿಗೆ ಭೇಟಿ ನೀಡಿದ್ದರು. ನಂತರದಲ್ಲಿ ರಾಮ್‌ಚೇತ್ ಅಂಗಡಿಯು ಜನಜನಿತವಾಗಿತ್ತು. ಮೂರು ತಿಂಗಳ ಹಿಂದೆ ರಾಮ್ ಚೇತ್ ಅವರು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ.
‘ರಾಹುಲ್ ಗಾಂಧಿ ಅವರು ರಾಮ್‌ಚೇತ್ ಅವರ ಕುಟುಂಬಸ್ಥರ ಕುಶಲೋಪರಿ ವಿಚಾರಿಸಿದರು. ಇದೇ ಸಂದರ್ಭದಲ್ಲಿ ರಾಮ್ ಚೇತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಭಿಷೇಕ್ ಸಿಂಗ್ ರಾಣಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.