ADVERTISEMENT

ಲಖನೌದಲ್ಲಿ ಶಂಕಿತ ಉಗ್ರರ ಬಂಧನ; ಮಥುರಾದಲ್ಲಿ ಭದ್ರತೆ ಹೆಚ್ಚಳ

ಪಿಟಿಐ
Published 12 ಜುಲೈ 2021, 9:28 IST
Last Updated 12 ಜುಲೈ 2021, 9:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಥುರಾ: ದೇಶದ ವಿವಿಧಡೆ ದಾಳಿ ನಡೆಸಲು ಸಂಚುರೂಪಿಸಿದ್ದ ಅಲ್‌ ಕೈದಾ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಶಂಕಿತ ಉಗ್ರರನ್ನು ಲಖೌನದಲ್ಲಿ ಬಂಧಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಮಥುರಾದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಲಖನೌ, ಮಥುರಾ, ವಾರಾಣಸಿ ಮತ್ತು ಅಯೋಧ್ಯೆ ಸೇರಿದಂತೆ ದೇಶದ ಪ್ರಮುಖ ದೇವಾಲಯಗಳಿರುವ ನಗರಗಳು ಹಾಗೂ ಜನನಿಬಿಡ ಪ್ರದೇಶದಲ್ಲಿ ಸ್ಫೋಟ ನಡೆಸಲು ಇವರು ಸಂಚು ರೂಪಿಸಿದ ಆರೋಪದ ಮೇಲೆ, ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್‌) ಪೊಲೀಸರು ಲಖನೌದಲ್ಲಿ ಉಗ್ರ ಸಂಘಟನೆಗಳಿಗೆ ಸೇರಿದ ಮಿನಾಜ್ ಮತ್ತು ಮುಶೀರ್ ಅವರನ್ನು ಬಂಧಿಸಿದ್ದರು.

ಈ ಹಿನ್ನೆಲೆಯಲ್ಲಿ ಮಥುರಾದ ಶ್ರೀಕೃಷ್ಣ ಜನ್ಮಸ್ಥಳ ಮತ್ತು ವೃಂದಾವನದಲ್ಲಿರುವ ಠಾಕುರ್ ಬಂಕೆ ಬಿಹಾರಿ ದೇವಾಲಯ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಮಥುರಾದಲ್ಲಿರುವ ಪ್ರಮುಖ ದೇವಾಲಯಗಳು ಹಾಗೂ ತೈಲ ಸಂಸ್ಕರಣಾ ಘಟಕಗಳ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ. ರಾಷ್ಟ್ರೀಯ ಭದ್ರತಾ ಪಡೆ (ಎಸ್‌ಪಿಜಿ) ಯೋಧರು ಎಲ್ಲ ಪ್ರಮುಖ ಸ್ಥಳಗಳ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ ಎಂದು ಎಸ್‌ಪಿ ಗೌರವ್ ಗ್ರೋವರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.