ADVERTISEMENT

ಉತ್ತರ ಪ್ರದೇಶ: ಪೊಲೀಸ್‌ ನೇಮಕಾತಿಯಲ್ಲಿ ಅಗ್ನಿವೀರರಿಗೆ ಶೇ 20 ಮೀಸಲಾತಿ

ಪಿಟಿಐ
Published 3 ಜೂನ್ 2025, 14:40 IST
Last Updated 3 ಜೂನ್ 2025, 14:40 IST
   

ಲಖನೌ: ಪೊಲೀಸ್‌ ಇಲಾಖೆಯ ವಿವಿಧ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಗ್ನಿವೀರರಿಗೆ ಶೇಕಡ 20ರಷ್ಟು ಮೀಸಲಾತಿ ನೀಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ತಿಳಿಸಿದೆ.   

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.     

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ  ಹಣಕಾಸು ಸಚಿವ  ಸುರೇಶ್‌ ಕುಮಾರ್‌ ಖನ್ನಾ, ಸರ್ಕಾರದ ಈ ನಿರ್ಧಾರವು ’ಅಗ್ನಿಪಥ್‌’ ಯೋಜನೆಯಡಿ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿರುವ ಅಗ್ನಿವೀರರಿಗೆ,  ಅರ್ಥಪೂರ್ಣ ಸೇವಾ ಅವಕಾಶಗಳನ್ನು ಕಲ್ಪಿಸಲಿದೆ’ ಎಂದರು.   

ADVERTISEMENT

‘ಇದೊಂದು ಮಹತ್ವದ ನಿರ್ಧಾರ. ಸಾಮಾನ್ಯ, ಎಸ್‌ಸಿ, ಎಸ್‌ಟಿ, ಒಬಿಸಿ ಸೇರಿದಂತೆ ಎಲ್ಲ ಪ್ರವರ್ಗಗಳಿಗೂ  ಈ ಮೀಸಲಾತಿ ಅನ್ವಯಿಸಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ  ಅಗ್ನಿವೀರರಿಗೆ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆಯೂ ಇದೆ’ ಎಂದು ಅವರು  ಹೇಳಿದರು. 

2026ನೇ ಸಾಲಿನಿಂದ ಜಾರಿಗೆ ಬರುವಂತೆ  ಪೊಲೀಸ್‌ ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್‌ ಪಿಎಸಿ, ಅಶ್ವಾರೋಹಿ ಪೊಲೀಸ್‌, ಅಗ್ನಿಶಾಮಕ ಸೇರಿ ನಾಲ್ಕು ವಿಭಾಗಗಳಲ್ಲಿ ನಡೆಯುವ ನೇಮಕಾತಿಗಳಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.