ನವದೆಹಲಿ: ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಯ ಅರ್ಜಿ ಸಲ್ಲಿಕೆಗೆ ತಾಂತ್ರಿಕ ತೊಡಕುಗಳು ಎದುರಾಗುತ್ತಿರುವ ಕಾರಣ ಲೋಕಸೇವಾ ಆಯೋಗವು ಕೆಲವೊಂದು ಬದಲಾವಣೆಗಳನ್ನು ತಂದಿದೆ.
‘ಅರ್ಜಿ ಸಲ್ಲಿಕೆಯ ವೇಳೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಆಕಾಂಕ್ಷಿಗಳು ನೀಡಿರುವ ದೂರನ್ನು ಪರಿಗಣಿಸಿ, ಒಂದೇ ಬಾರಿಗೆ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಆಯೋಗವು ಅಧಿಸೂಚನೆಯಲ್ಲಿ ತಿಳಿಸಿದೆ.
‘ಹೆಸರು, ಜನ್ಮ ದಿನಾಂಕ, ತಂದೆಯ ಹೆಸರು, ತಾಯಿಯ ಹೆಸರು, ಮೊಬೈಲ್ ನಂಬರ್ ಮತ್ತು ಇ–ಮೇಲ್ ಅನ್ನು ತಿದ್ದುಪಡಿ ಮಾಡಲು ಅವಕಾಶಗಳಿಲ್ಲ. ಅಭ್ಯರ್ಥಿಯ ಮೊಬೈಲ್ ಸಂಖ್ಯೆ ಯಾವುದಾದರೂ ಕಾರಣದಿಂದ ಬದಲಾದಲ್ಲಿ, ಇ–ಮೇಲ್ ಮೂಲಕ ಅದನ್ನು ಬದಲಿಸಬಹುದಾಗಿದೆ. ಈ ವೇಳೆ ಇ–ಮೇಲ್‌ಗೆ ಒಟಿಪಿ ಬರುತ್ತದೆ’ ಎಂದು ಆಯೋಗ ತಿಳಿಸಿದೆ.
ಅಭ್ಯರ್ಥಿಯ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಖಾತೆಗಳೆರಡೂ ಲಭ್ಯವಿಲ್ಲದಿದ್ದರೆ, ಅಂಕ ಪಟ್ಟಿ, ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಅಥವಾ ವಾಹನ ಚಾಲನಾ ಪರವಾನಗಿ, ಭಾವಚಿತ್ರದೊಂದಿಗೆ ನಿಗದಿತ ನಮೂನೆಯಲ್ಲಿ ಆಯೋಗಕ್ಕೆ ಮನವಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಯ ಅವಧಿಯನ್ನು ಫೆ.1ರವರೆಗೆ ವಿಸ್ತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.