ADVERTISEMENT

ಯುಪಿಎಸ್‌ಸಿಯಿಂದ 89 ಹೆಚ್ಚುವರಿ ಅಭ್ಯರ್ಥಿಗಳ ಶಿಫಾರಸು

ಪಿಟಿಐ
Published 1 ನವೆಂಬರ್ 2023, 14:46 IST
Last Updated 1 ನವೆಂಬರ್ 2023, 14:46 IST
ಯುಪಿಎಸ್‌ಸಿ
ಯುಪಿಎಸ್‌ಸಿ   

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು(ಯುಪಿಎಸ್‌ಸಿ) ವಿವಿಧ ನಾಗರಿಕ ಸೇವೆಗಳಿಗೆ ಇನ್ನೂ 89 ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಶಿಫಾರಸು ಮಾಡಿದೆ.  

ಯುಪಿಎಸ್‌ಸಿ 2022ರ ಪರೀಕ್ಷಾ ಫಲಿತಾಂಶದ ಆಧಾರದ ಮೇಲೆ ಈ ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿದೆ. ಇವರೆಲ್ಲರೂ ಆಯೋಗವು ಕಾಯ್ದಿರಿಸಿದ ಪಟ್ಟಿಯಲ್ಲಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.   

ಈ ವರ್ಷದ ಮೇ ತಿಂಗಳಲ್ಲಿ 2022ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿತ್ತು. ಆಗ ನಾಗರಿಕ ಸೇವೆಗಳಿಗೆ 933 ಅಭ್ಯರ್ಥಿಗಳ ಪಟ್ಟಿಯನ್ನು ಶಿಫಾರಸು ಮಾಡಲಾಗಿತ್ತು. 

ADVERTISEMENT

ಮೊದಲ ಶಿಫಾರಸು ಪಟ್ಟಿಯನ್ನು ಹೊರತುಪಡಿಸಿ, ಮೆರಿಟ್‌ ಆಧಾರದಲ್ಲಿ ಆಯೋಗವು ಮೀಸಲಾತಿವಾರು ಪ್ರತ್ಯೇಕ ಪಟ್ಟಿಯೊಂದನ್ನು ಹೊಂದಿರುತ್ತದೆ. 

‘ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕೋರಿಕೆಯ ಮೇರೆಗೆ ಆಯೋಗವು ಹೆಚ್ಚುವರಿಯಾಗಿ 89 ಅಭ್ಯರ್ಥಿಗಳನ್ನು ವಿವಿಧ ಸೇವೆಗಳಿಗೆ ಶಿಫಾರಸು ಮಾಡಿದೆ. ಇದರಲ್ಲಿ 65 ಮಂದಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿದ್ದರೆ, ಆರ್ಥಿಕವಾಗಿ ಹಿಂದುಳಿದ (ಇಡಬ್ಲ್ಯುಎಸ್‌) 7, ಹಿಂದುಳಿದ ವರ್ಗಗಳ (ಒಬಿಸಿ) 15, ಪರಿಶಿಷ್ಟ ಜಾತಿ–ಪಂಗಡದ(ಎಸ್‌ಸಿ–ಎಸ್‌ಟಿ) ತಲಾ ಒಬ್ಬ ಅಭ್ಯರ್ಥಿಗಳಿದ್ದಾರೆ‘ ಎಂದು ಯುಪಿಎಸ್‌ಸಿ ತಿಳಿಸಿದೆ.  

ಶಿಫಾರಸುಗೊಂಡಿರುವ 89 ಅಭ್ಯರ್ಥಿಗಳ ಪಟ್ಟಿಯು ಯುಪಿಎಸ್‌ಸಿಯ ವೆಬ್‌ಸೈಟ್‌ http//www.upsc.gov.inನಲ್ಲಿ ಲಭ್ಯವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.