ADVERTISEMENT

ದೆಹಲಿ: ಅಂತರ್ಜಲದಲ್ಲಿ ಯುರೇನಿಯಂ ಪತ್ತೆ

ಪಿಟಿಐ
Published 28 ನವೆಂಬರ್ 2025, 14:43 IST
Last Updated 28 ನವೆಂಬರ್ 2025, 14:43 IST
   

ನವದೆಹಲಿ: ವಾಯು ಮಾಲಿನ್ಯದಿಂದ ತತ್ತರಿಸುತ್ತಿರುವ ದೆಹಲಿ ಜನರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ಶುಕ್ರವಾರ ವಾರ್ಷಿಕ ಅಂತರ್ಜಲ ಗುಣಮಟ್ಟ ವರದಿ 2025 ಬಹಿರಂಗಗೊಂಡಿದ್ದು, ಸಂಗ್ರಹಿಸಿದ ನೀರಿನ ಮಾದರಿಗಳಲ್ಲಿ ಶೇ 13 ರಿಂದ 15 ರಷ್ಟು ನೀರಿನಲ್ಲಿ ಯುರೇನಿಯಂ ಪತ್ತೆಯಾಗಿದೆ ಎಂದು ತಿಳಿಸಿದೆ.

ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ಬಿಡುಗಡೆಯಾದ ಕೇಂದ್ರ ಅಂತರ್ಜಲ ಮಂಡಳಿಯ(ಸಿಸಿಡಬ್ಲ್ಯುಬಿ) ವರದಿಯು 2024ರಲ್ಲಿ ಭಾರತದಾದ್ಯಂತ ಸಂಗ್ರಹಿಸಲಾದ ಸುಮಾರು 15,000 ಅಂತರ್ಜಲ ಮಾದರಿಗಳನ್ನು ಆಧರಿಸಿದೆ.

ದೆಹಲಿಯ 86 ಸ್ಥಳಗಳಲ್ಲಿನ ಅಂತರ್ಜಲದ ಮಾದರಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಆ ಪೈಕಿ ಕೆಲವು ಮಾದರಿಗಳಲ್ಲಿ ಕುಡಿಯುವ ನೀರಿಗೆ ಇರುವ ಮಿತಿಗಳನ್ನು ಮೀರಿರುವುದು ಕಂಡುಬಂದಿದೆ ಎಂದು ವರದಿ ತಿಳಿಸಿದೆ.

ADVERTISEMENT

ಒಟ್ಟಾರೆಯಾಗಿ, ಭಾರತದಲ್ಲಿ ಹೆಚ್ಚಿನ ಅಂತರ್ಜಲ ಸುರಕ್ಷಿತವಾಗಿದ್ದರೂ, ಕೆಲವು ಪ್ರದೇಶಗಳಲ್ಲಿ ಯುರೇನಿಯಂ ಮಟ್ಟವು ಏರುತ್ತಿರುವುದನ್ನು ಅಧ್ಯಯನವು ಎತ್ತಿ ತೋರಿಸಿದೆ. ಕುಡಿಯುವ ನೀರಿನ ಗುಣಮಟ್ಟ ಮತ್ತು ಆರೋಗ್ಯವನ್ನು ರಕ್ಷಿಸಲು ನಿಯಮಿತ ಮೇಲ್ವಿಚಾರಣೆ ಹಾಗೂ ಸ್ಥಳೀಯವಾಗಿ ಅಂತರ್ಜಲದಲ್ಲಿ ಯುರೇನಿಯಂ ತಗ್ಗಿಸುವ ಕ್ರಮಗಳ ಅಗತ್ಯವನ್ನು ವರದಿ ಒತ್ತಿಹೇಳಿದೆ.

ದೆಹಲಿಯಲ್ಲಿ ವಿಶ್ಲೇಷಿಸಿದ ಒಟ್ಟು 83 ಮಾದರಿಗಳಲ್ಲಿ 24 ಯುರೇನಿಯಂ ನಿಯತಾಂಕಗಳನ್ನು ಮೀರಿರುವುದು ಕಂಡುಬಂದಿದೆ. ಇದು ಸಂಗ್ರಹಿಸಿದ ಒಟ್ಟು ಮಾದರಿಗಳಲ್ಲಿ ಸರಿಸುಮಾರು ಶೇ 13.35 ಮತ್ತು ಶೇ 15.66ರ ವ್ಯಾಪ್ತಿಯಲ್ಲಿದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.