ADVERTISEMENT

ಊರ್ಮಿಳಾಗೆ ಪೊಲೀಸ್ ಭದ್ರತೆ

ಪಿಟಿಐ
Published 15 ಏಪ್ರಿಲ್ 2019, 18:50 IST
Last Updated 15 ಏಪ್ರಿಲ್ 2019, 18:50 IST
ಊರ್ಮಿಳಾ
ಊರ್ಮಿಳಾ   

ಮುಂಬೈ: ಉತ್ತರ ಮುಂಬೈನಲ್ಲಿ ಚುನಾವಣಾ ಪ್ರಚಾರದ ವೇಳೆ ಘರ್ಷಣೆ ನಡೆದ ಕಾರಣ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೊಂಡ್ಕರ್ ಅವರಿಗೆ ಸೋಮವಾರ ಪೊಲೀಸ್ ಭದ್ರತೆ ನೀಡಲಾಗಿದೆ.

ತಮಗೆ ರಕ್ಷಣೆ ನೀಡುವಂತೆ ಊರ್ಮಿಳಾ ಮಾತೊಂಡ್ಕರ್ ಅವರು ಪೊಲೀಸರಿಗೆ ಮನವಿ ಮಾಡಿದ್ದರು.

‘ಚುನಾವಣೆ ಮುಗಿಯುವವರೆಗೆ ಊರ್ಮಿಳಾ ಅವರಿಗೆ ಭದ್ರತೆ ನೀಡಲಾಗುವುದು. ಘರ್ಷಣೆ ಬಗ್ಗೆ ಸೂಕ್ತ ಸಾಕ್ಷ್ಯಗಳಿಲ್ಲ. ಘಟನೆಯಲ್ಲಿ ಭಾಗಿಯಾಗಿದ್ದವರು ರೈಲು ಪ್ರಯಾಣಿಕರು ಎಂದಷ್ಟೇ ಹೇಳಬಹುದು’ ಎಂದು ಡಿಸಿಪಿ ಸಂಗ್ರಾಮ್‌ಸಿಂಗ್ ತಿಳಿಸಿದ್ದಾರೆ.

ADVERTISEMENT

ತಮ್ಮ ಚುನಾವಣಾ ರ್‍ಯಾಲಿ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಏಕಾಏಕಿ ನುಗ್ಗಿದ್ದನ್ನು ಖಂಡಿಸಿ ಪೊಲೀಸರಿಗೆ ದೂರು ನೀಡಿದ್ದ ಊರ್ಮಿಳಾ, ರಕ್ಷಣೆ ನೀಡುವಂತೆ ಕೋರಿದ್ದರು.

‘ನಮ್ಮತ್ತ ನುಗ್ಗಿದ ಕೆಲವರು ಕೀಳು ಅಭಿರುಚಿಯ ನೃತ್ಯ ಮಾಡಿ, ಅಸಭ್ಯ ಭಾಷೆ ಬಳಸಿದರು. ಭೀತಿ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.