ADVERTISEMENT

ಯೋಧರಿಗಾಗಿ ಶೋಧ: ಗುಜರಾತ್‌ನ ಫೋರೆನ್ಸಿಕ್ ವಿ.ವಿ. ಜೊತೆ ಅಮೆರಿಕ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 27 ಮೇ 2021, 21:37 IST
Last Updated 27 ಮೇ 2021, 21:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್‌: ಎರಡನೇ ಜಾಗತಿಕ ಯದ್ಧದ ಸಂದರ್ಭದಲ್ಲಿ ನಾಪತ್ತೆಯಾಗಿರುವ ತನ್ನ 400 ಜನ ಯೋಧರ ‘ಪತ್ತೆ ಹಾಗೂ ಗುರುತಿಸುವ’ ಕಾರ್ಯದಲ್ಲಿ ನೆರವು ಬಯಸಿ ಅಮೆರಿಕದ ರಕ್ಷಣಾ ಇಲಾಖೆಯು ಗುಜರಾತ್‌ನ ನ್ಯಾಷನಲ್ ಫೋರೆನ್ಸಿಕ್‌ ಸೈನ್ಸಸ್‌ ಯೂನಿವರ್ಸಿಟಿ (ಎನ್‌ಎಫ್‌ಎಸ್‌ಯು) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.

ಯುದ್ಧದ ಸಂದರ್ಭದಲ್ಲಿ ದೇಶದ ಈಶಾನ್ಯ ಭಾಗದಲ್ಲಿ ಜಪಾನ್‌ ಸೇನೆ ದಾಳಿ ನಡೆಸಿತ್ತು. ಹೋರಾಟದ ವೇಳೆ ಯೋಧರು ನಾಪತ್ತೆಯಾಗಿದ್ದಾರೆ. ಯೋಧರ ಮೃತದೇಹಗಳನ್ನು ಪತ್ತೆ ಹಚ್ಚಿ, ಅವರ ಗುರುತು ಕಂಡುಹಿಡಿದು ಕುಟುಂಬಸ್ಥರಿಗೆ ಮಾಹಿತಿ ನೀಡುವ ಸಂಬಂಧ ಅಮೆರಿಕ ಸರ್ಕಾರ ಈ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ.

‘ನಾಪತ್ತೆಯಾಗಿರುವ 400 ಯೋಧರ ಡಿಎನ್‌ಎ ಮಾಹಿತಿಅಮೆರಿಕದ ರಕ್ಷಣಾ ಇಲಾಖೆ ಬಳಿ ಇದೆ. ಈ ಡಿಎನ್‌ಎಗೆ ಸರಿಹೊಂದಬಹುದಾದ ಯೋಧರಿಗೆ ಸಂಬಂಧಿಸಿದ ಮಾಹಿತಿಗಾಗಿ ಇಲಾಖೆ ಯತ್ನಿಸುತ್ತಿದೆ’ ಎಂದು ಎನ್‌ಎಫ್‌ಎಸ್‌ಯು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.