ADVERTISEMENT

ಅಮೆರಿಕ: ಅಕ್ಟೋಬರ್ ‘ಹಿಂದೂ ಪರಂಪರೆ ಮಾಸ’ವಾಗಿ ಆಚರಣೆ

ಇತಿಹಾಸ, ಪರಂಪರೆಯ ಮೂಲಕ ಅಪೂರ್ವ ಕೊಡುಗೆ

ಪಿಟಿಐ
Published 25 ಸೆಪ್ಟೆಂಬರ್ 2021, 22:36 IST
Last Updated 25 ಸೆಪ್ಟೆಂಬರ್ 2021, 22:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹ್ಯೂಸ್ಟನ್: ಟೆಕ್ಸಾಸ್, ಫ್ಲಾರಿಡಾ, ನ್ಯೂಜೆರ್ಸಿ, ಓಹಿಯೊ ಮತ್ತು ಮೆಸ್ಸಾಚ್ಯುಸೆಟ್ಸ್ ಸೇರಿದಂತೆ ಅಮೆರಿಕದ ಹಲವು ರಾಜ್ಯಗಳು ಅಕ್ಟೋಬರ್ ತಿಂಗಳನ್ನು ‘ಹಿಂದೂ ಪರಂಪರೆಯ ಮಾಸ’ ಎಂದು ಘೋಷಿಸಿವೆ.

ವಿವಿಧ ರಾಜ್ಯಗಳ ರಾಜ್ಯಪಾಲರು ಈ ಸಂಬಂಧ ಘೋಷಣೆಯನ್ನು ಹೊರಡಿಸಿದ್ದು, ‘ಸಮುದಾಯಗಳು ಬಹಳ ಹಿಂದಿನಿಂದಲೂ ಭರವಸೆಯ ದಾರಿದೀಪಗಳಾಗಿ ಸೇವೆ ಸಲ್ಲಿಸುತ್ತಿವೆ. ತಮ್ಮ ನಂಬಿಕೆಗಳನ್ನು ಹಂಚಿಕೊಳ್ಳುತ್ತವೆ ಮತ್ತು ಸೇವೆಯ ಮೂಲಕ ತಮ್ಮ ಸಮುದಾಯಗಳನ್ನು ಉತ್ತಮಗೊಳಿಸುತ್ತವೆ. ಹಿಂದೂ ಧರ್ಮವು ತನ್ನ ವಿಶಿಷ್ಟ ಇತಿಹಾಸ ಮತ್ತು ಪರಂಪರೆಯ ಮೂಲಕ ನಮ್ಮ ರಾಜ್ಯ ಮತ್ತು ರಾಷ್ಟ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದೆ’ ಎಂದೂ ಅಭಿಪ್ರಾಯ ವ್ಯಕ್ತಪಡಿಸಿವೆ.

ಅಮೆರಿಕದಲ್ಲಿರುವ ವಿವಿಧ ರಾಜ್ಯಗಳು ಈ ಘೋಷಣೆಯನ್ನು ಪ್ರಕಟಿಸಿದ ಬಳಿಕ, ಅಲ್ಲಿರುವ ಹಿಂದೂ ಸಂಘಟನೆಗಳು ಈಗ ಹಿಂದೂ ಪರಂಪರೆಯ ಮಾಸಾಚರಣೆಯ ಪ್ರಚಾರಕ್ಕಾಗಿ ಶ್ರಮಿಸುತ್ತಿವೆ. ಈ ಹಿಂದೆ ಈ ಸಂಘಟನೆಗಳು ಅಕ್ಟೋಬರ್ ತಿಂಗಳನ್ನು ಹಿಂದೂ ಪರಂಪರೆಯ ಮಾಸವೆಂದು ಆಚರಣೆ ಮಾಡುತ್ತಿದ್ದವು.

ADVERTISEMENT

‘ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಅಧಿಕೃತವಾಗಿ ಅಕ್ಟೋಬರ್ ತಿಂಗಳನ್ನು ಹಿಂದೂ ಪರಂಪರೆಯ ತಿಂಗಳಾಗಿ ಘೋಷಿಸಬೇಕು’ ಎಂದೂ ಹಿಂದೂ ಸಂಘಟಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.