ADVERTISEMENT

ಅಮೆರಿಕ ಪಡೆಗಳು ಸೀಮಿತ ಅವಧಿಯವರೆಗೆ ಮಾತ್ರ ಪಾಕ್‌ನಲ್ಲಿ ಇರಲಿವೆ: ಪಾಕ್‌ ಸಚಿವ

ಪಿಟಿಐ
Published 31 ಆಗಸ್ಟ್ 2021, 7:47 IST
Last Updated 31 ಆಗಸ್ಟ್ 2021, 7:47 IST
ಅಫ್ಗಾನಿಸ್ತಾನದಿಂದ ಚಮನ್‌ ಗಡಿ ಮೂಲಕ ಪಾಕಿಸ್ತಾನ ಪ್ರವೇಶಿಸಿದ ಅಫ್ಗನ್ನರು      –ಎಎಫ್‌ಪಿ ಚಿತ್ರ
ಅಫ್ಗಾನಿಸ್ತಾನದಿಂದ ಚಮನ್‌ ಗಡಿ ಮೂಲಕ ಪಾಕಿಸ್ತಾನ ಪ್ರವೇಶಿಸಿದ ಅಫ್ಗನ್ನರು      –ಎಎಫ್‌ಪಿ ಚಿತ್ರ   

ಇಸ್ಲಾಮಾಬಾದ್‌: ‘ಪಾಕಿಸ್ತಾನದಲ್ಲಿ ಅಫ್ಗಾನಿಸ್ತಾನದಿಂದ ಆಗಮಿಸುವ ಸೈನಿಕರಿಗೆ ದೀರ್ಘಾವಧಿ ತನಕ ಉಳಿಯಲು ಸರ್ಕಾರ ಅನುಮತಿ ನೀಡುವ ಸಾಧ್ಯತೆಗಳಿವೆ’ ಎಂಬ ಸುದ್ದಿಯನ್ನು ಪಾಕಿಸ್ತಾನ ತಳ್ಳಿ ಹಾಕಿದೆ. ಅಮೆರಿಕದ ಪಡೆಗಳು ದೇಶದಲ್ಲಿ ಸೀಮಿತ ಅವಧಿಯವರೆಗೆ ಮಾತ್ರ ಇರಲಿವೆ’ ಎಂದು ಹೇಳಿದೆ.

ಇಸ್ಲಾಮಾಬಾದ್‌ ವಿಮಾನ ನಿಲ್ದಾಣದಲ್ಲಿ ಅಮೆರಿಕ ಪಡೆಗಳಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದರಿಂದಾಗಿ ಅಮೆರಿಕ ಸೇನೆಯು ಪಾಕಿಸ್ತಾನದಲ್ಲಿ ದೀರ್ಘಕಾಲವರೆಗೆ ಇರಲಿವೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಪಾಕಿಸ್ತಾನದ ಆಂತರಿಕ ಸಚಿವ ಶೇಖ್‌ ರಶೀದ್‌ ಅಹಮದ್‌ ಅವರು,‘ ಅಫ್ಗಾನಿಸ್ತಾನದಿಂದ ಸ್ಥಳಾಂತರಗೊಂಡ ನಂತರ ವಿದೇಶಿಯರು ಪಾಕಿಸ್ತಾನಕ್ಕೆ ಬಂದಿದ್ದಾರೆ. ಅವರ ವಾಸ್ತವ್ಯವು ಸೀಮಿತ ಅವಧಿಯದ್ದಾಗಿದೆ. 21 ರಿಂದ 30 ದಿನಗಳವರೆಗಿನ ತಾತ್ಕಾಲಿಕ ವೀಸಾಗಳನ್ನು ಅವರಿಗೆ ನೀಡಲಾಗಿದೆ’ ಎಂದು ಡಾನ್‌ ಪತ್ರಿಕೆಗೆ ತಿಳಿಸಿದರು.

ADVERTISEMENT

‘ತೊರ್ಖಾಂ ಗಡಿಯಿಂದ 2,192 ವ್ಯಕ್ತಿಗಳು ಪಾಕಿಸ್ತಾನವನ್ನು ಪ್ರವೇಶಿಸಿದ್ದಾರೆ. 1,627 ಮಂದಿ ವಿಮಾನದ ಮೂಲಕ ಇಸ್ಲಾಮಾಬಾದ್‌ಗೆ ಆಗಮಿಸಿದ್ದಾರೆ. ಸ್ವಲ್ಪ ಜನರು ಚಮನ್‌ ಗಡಿಯಿಂದ ಬಂದಿದ್ದಾರೆ’ ಎಂದು ಅವರು ಹೇಳಿದರು.

‘ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ನಡುವೆ ಚಮನ್ ಗಡಿಯ ಮೂಲಕ ಪ್ರತಿನಿತ್ಯ ಅನೇಕ ಜನರು ಪ್ರಯಾಣಿಸುತ್ತಿದ್ದರು. ಅಫ್ಗನ್ನರು ಪಾಕಿಸ್ತಾನಕ್ಕೆ ಆಗಮಿಸುತ್ತಾರೆ. ಬಳಿಕ ತಮ್ಮ ದೇಶಕ್ಕೆ ಮರಳುತ್ತಾರೆ. ಇದು ಸಾಮಾನ್ಯ ಚಟುವಟಿಕೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.