ನವದೆಹಲಿ: 2024-25ರಲ್ಲಿ ಭಾರತದಲ್ಲಿ ಸುಮಾರು 1.5 ಕೋಟಿ ಜನರು ಕಾಡ್ಗಿಚ್ಚಿನ ಅಪಾಯಕ್ಕೆ ಸಿಲುಕಿದ್ದರು. ಅದರಲ್ಲೂ ಉತ್ತರ ಪ್ರದೇಶದ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಜಾಗತಿಕ ಅಧ್ಯಯನವೊಂದು ಹೇಳಿದೆ.
ಉತ್ತರ ಪ್ರದೇಶವು ದಾಖಲೆಯ ಕಾಡ್ಗಿಚ್ಚಿಗೆ ಒಳಗಾಗಿದೆ. ತೀವ್ರ ಬಿಸಿಲಿನ ಶಾಖ, ಕೃಷಿ ತ್ಯಾಜ್ಯ ಸುಡುವುದರಿಂದ ಭೂಮಿಯಲ್ಲಿ ಶಾಖ ಉತ್ಪಾದನೆ ಹೆಚ್ಚಾಗಿ ಒಣ ಇಂಧನ ಉತ್ಪತ್ತಿಯಾಗುತ್ತದೆ. ಇದರಿಂದ ಬೆಳೆ ಸುಡುವಿಕೆ, ಕಾಡ್ಗಿಚ್ಚು ಉಂಟಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ನವೆಂಬರ್ 2024 ರಲ್ಲಿ ನವದೆಹಲಿಯಲ್ಲಿ ತೀವ್ರ ಪ್ರಮಾಣದ ಹೊಗೆ ಕಂಡಿದೆ. ಅತಿ ಸೂಕ್ಷ್ಮ ದೂಳಿನ ಕಣ (PM2.5)ಮಟ್ಟಗಳು ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ ದೈನಂದಿನ ಮಾನದಂಡಕ್ಕಿಂತ 13 ಪಟ್ಟು ತಲುಪಿವೆ. ಪ್ರತಿ ಘನ ಮೀಟರ್‌ಗೆ 200 ಮೈಕ್ರೋಗ್ರಾಂಗಳಿಗಿಂತ ಹೆಚ್ಚು ಎಂದು ಜರ್ನಲ್ ಅರ್ಥ್ ಸಿಸ್ಟಮ್ ಸೈನ್ಸ್ ಡೇಟಾದಲ್ಲಿ ವಾರ್ಷಿಕ 'ಸ್ಟೇಟ್ ಆಫ್ ವೈಲ್ಡ್ ಫೈರ್ಸ್' ವರದಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.