ADVERTISEMENT

‘ರಾಜ್ಯಪಾಲರೇ ವಾಪಸ್‌ ಹೋಗಿ’ ಘೋಷಣೆ ಕೂಗಿದ ವಿರೋಧ ಪಕ್ಷಗಳ ನಾಯಕರು

ಉತ್ತರ ಪ್ರದೇಶ ವಿಧಾನಸಭೆ ಬಜೆಟ್‌ ಅಧಿವೇಶನ: ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ

ಪಿಟಿಐ
Published 6 ಫೆಬ್ರುವರಿ 2019, 2:15 IST
Last Updated 6 ಫೆಬ್ರುವರಿ 2019, 2:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶದ ಬಜೆಟ್‌ ಜಂಟಿ ಅಧಿವೇಶನದ ಮೊದಲ ದಿನವಾದ ಮಂಗಳವಾರ ವಿರೋಧ ಪಕ್ಷಗಳು ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿದವು. ‘ರಾಜ್ಯಪಾಲರೇ ವಾಪಸ್‌ ಹೋಗಿ’ ಎಂದು ಘೋಷಣೆ ಕೂಗುತ್ತಾ, ಕಾಗದದ ತುಂಡುಗಳನ್ನು ಪೋಡಿಯಂನತ್ತ ಎಸೆದು ವಿರೋಧ ಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ 55 ನಿಮಿಷಗಳ ಭಾಷಣದಲ್ಲಿ ಸರ್ಕಾರ ಕೈಗೊಂಡಿರುವ ಜನಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ರಾಜ್ಯಪಾಲ ರಾಮ್‌ ನಾಯ್ಕ್ ಪ್ರಸ್ತಾಪಿಸಿದರು. ಅಲ್ಲದೆ, ಅಲಹಾಬಾದ್‌ ಮತ್ತು ಫೈಜಾಬಾದ್‌ ಜಿಲ್ಲೆಗಳ ಹೆಸರು ಬದಲಿಸಿದ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ವಿರೋಧಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿ ಉಂಟು ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.