ADVERTISEMENT

ಉತ್ತರ ಪ್ರದೇಶ: ಮುಷ್ಕರಗಳ ಮೇಲಿನ ನಿಷೇಧ 6 ತಿಂಗಳು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 27 ಮೇ 2021, 13:01 IST
Last Updated 27 ಮೇ 2021, 13:01 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಲಖನೌ(ಪಿಟಿಐ): ಉತ್ತರ ಪ್ರದೇಶ ಸರ್ಕಾರವು ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯನ್ನು ಇನ್ನೂ ಆರು ತಿಂಗಳ ಕಾಲ ವಿಸ್ತರಿಸುವ ಮೂಲಕಮುಷ್ಕರಗಳ ಮೇಲೆ ಹೇರಿದ್ದ ನಿಷೇಧವನ್ನು ಮುಂದುವರಿಸಿದೆ.

ಸರ್ಕಾರದ ಅಡಿಯಲ್ಲಿ ಬರುವ ಸಾರ್ವಜನಿಕ ಸೇವೆಗಳು, ನಿಗಮಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮುಷ್ಕರ ನಡೆಸುವಂತಿಲ್ಲ. ಒಂದು ವೇಳೆ ಸಾರ್ವಜನಿಕ ಸೇವೆಯಲ್ಲಿರುವವರು ಈ ಕಾನೂನನ್ನು ಉಲ್ಲಂಘಿಸಿ ಮುಷ್ಕರ ಹೂಡಿದರೆ ಪೊಲೀಸರು ಅವರನ್ನು ವಾರಂಟ್‌ ಇಲ್ಲದೆಯೇ ಬಂಧಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ಕಾಯ್ದೆಯನ್ನು ಉತ್ತರ ಪ್ರದೇಶ ಸರ್ಕಾರ ಕಳೆದ ವರ್ಷ ಮೇನಲ್ಲಿ 6 ತಿಂಗಳ ಅವಧಿಗೆ ಜಾರಿಗೆ ತಂದಿತ್ತು. ನವೆಂಬರ್‌ನಲ್ಲಿ ಅದನ್ನು ಮತ್ತೆ 6 ತಿಂಗಳ ಅವಧಿಗೆ ವಿಸ್ತರಿಸಿತ್ತು. ಈಗ ಆ ಕಾಯ್ದೆಯನ್ನು ಇನ್ನೂ 6 ತಿಂಗಳು ಮುಂದುವರೆಸಲು ನಿರ್ಧರಿಸಿದೆ.

ADVERTISEMENT

ಈ ಕಾಯ್ದೆ ಅಡಿ ಮುಷ್ಕರ ನಡೆಸುವುದು ಕಾನೂನು ಬಾಹಿರ. ಈ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ 1 ವರ್ಷ ಜೈಲು ಶಿಕ್ಷೆ ಅಥವಾ ₹1,000 ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.