ADVERTISEMENT

ಬಹ್ರೈಚ್: ಪತ್ನಿ ಕೊಂದು, ಕೊಠಡಿಯಲ್ಲಿ ಶವ ಹೂತು ಹಾಕಿದ ಪತಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 15:53 IST
Last Updated 19 ಅಕ್ಟೋಬರ್ 2025, 15:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಹ್ರೈಚ್: ಪತ್ನಿಯನ್ನು ಹತ್ಯೆಗೈದ ವ್ಯಕ್ತಿಯೊಬ್ಬ, ಆಕೆಯ ಮೃತದೇಹವನ್ನು ಮಂಚದ ಕೆಳಗೆ ಹೂತು ಹಾಕಿದ್ದ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದೆ. 

ನರ್ಪತ್‌ಪುರವ ಗ್ರಾಮದ ನಿವಾಸಿಯಾಗಿರುವ ಆರೋಪಿ ಹರಿಕೃಷ್ಣನ್‌, ತನ್ನ ಪತ್ನಿ ಫೂಲಾದೇವಿಯನ್ನು (45) ಹತ್ಯೆ ಮಾಡಿ, ಮನೆಯ ಕೊಠಡಿಯಲ್ಲಿ ಮಂಚದ ಕೆಳಗೆ ಹೂತು ಹಾಕಿದ್ದಾನೆ. ಅದೇ ಮಂಚದ ಮೇಲೆ ಆತ ಮಲಗುತ್ತಿದ್ದ ಎಂದು ಪೊಲೀಸರು ಭಾನುವಾರ ತಿಳಿಸಿದರು. 

ಅ.6ರಿಂದ ಫೂಲಾ ಅವರು ಕಾಣೆಯಾಗಿದ್ದರಿಂದ ಆಕೆಯ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. 

ADVERTISEMENT

ಮಂಚದ ಕೆಳಗೆ ಮಣ್ಣು ಅಗೆದು, ಮುಚ್ಚಿದ್ದನ್ನು ಗಮನಿಸಿದ ಫೂಲಾ ಅವರ ಸಹೋದರ ಅನುಮಾನಗೊಂಡು, ಶುಕ್ರವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಬಳಿಕ ಪರಿಶೀಲನೆ ನಡೆಸಿ, ಮೃತದೇಹವನ್ನು ಹೊರತೆಗೆಯಲಾಗಿದೆ. ಆರೋಪಿ ಹರಿಕೃಷ್ಣನ್‌ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.