ADVERTISEMENT

ಉಗ್ರ ಸಂಘಟನೆಯ ಜೊತೆಗೆ ಸಂಪರ್ಕ ಶಂಕೆ: ಕರ್ನಾಟಕ ಮೂಲದ ಮದರಸಾ ವಿದ್ಯಾರ್ಥಿ ಬಂಧನ

ಪಿಟಿಐ
Published 31 ಜುಲೈ 2022, 12:51 IST
Last Updated 31 ಜುಲೈ 2022, 12:51 IST
 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಹರನ್‌ಪುರ, ಉತ್ತರ ಪ್ರದೇಶ: ಕರ್ನಾಟಕ ಮೂಲದ ಮದರಸಾ ವಿದ್ಯಾರ್ಥಿಯೊಬ್ಬನನ್ನು ಉಗ್ರಗಾಮಿ ಸಂಘಟನೆಯ ಜೊತೆಗೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ಫಾರೂಕ್ ಹೆಸರಿನ ವಿದ್ಯಾರ್ಥಿಯು ದಿಯೊಬಂದ್‌ನ ಮದರಸಾದಲ್ಲಿ ವಾಸ್ತವ್ಯ ಮಾಡಿದ್ದ ಎಂದು ಪೊಲೀಸ್‌ ವರಿಷ್ಠಾಧಿಕಾರಿ ವಿಪಿನ್‌ ತಾಡಾ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಫಾರೂಕ್‌ಗೆ ಹಲವು ಭಾಷೆಗಳು ಗೊತ್ತಿದೆ. ಪಾಕಿಸ್ತಾನದ ಗುಪ್ತಚರ ವಿಭಾಗ ಐಎಸ್‌ಐ ಜೊತೆಗೆ ಸಾಮಾಜಿಕ ಜಾಲತಾಣದ ಆ್ಯಪ್‌ ಮೂಲಕ ಸಂಪರ್ಕದಲ್ಲಿದ್ದ. ಈತನನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ADVERTISEMENT

ದಿಯೊಬಂದ್‌ನಲ್ಲಿ ಇದೇ 23ರಂದು ರೊಹಿಂಗ್ಯಾ ವಿದ್ಯಾರ್ಥಿ ಮುಜಿಬುಲ್ಲಾ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.