ADVERTISEMENT

ಉತ್ತರ ಪ್ರದೇಶ: 17 ಮಕ್ಕಳು ಸೇರಿ 89 ಜನರಲ್ಲಿ ಝೀಕಾ ವೈರಸ್‌ ಪತ್ತೆ

ರಾಯಿಟರ್ಸ್
Published 8 ನವೆಂಬರ್ 2021, 11:15 IST
Last Updated 8 ನವೆಂಬರ್ 2021, 11:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶದಲ್ಲಿ ಝೀಕಾ ವೈರಾಣು ಉಲ್ಬಣಗೊಂಡಿದ್ದು ಕಾನ್ಪುರದಲ್ಲಿ ಕನಿಷ್ಠ 17 ಮಂದಿ ಮಕ್ಕಳು ಸೇರಿದಂತೆ 89 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

’ಝೀಕಾ ವೈರಾಣು ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದ್ದು ಅದರ ಹರಡುವಿಕೆ ತಡೆಗಟ್ಟಲು ಆರೋಗ್ಯ ಇಲಾಖೆಯು ಹಲವು ತಂಡಗಳನ್ನು ರಚಿಸಿದೆ‘ ಎಂದು ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ನೇಪಾಲ್‌ ಸಿಂಗ್‌ ತಿಳಿಸಿದರು.

’ಝೀಕಾ ಸೋಂಕಿತರಲ್ಲಿ ಒಬ್ಬ ಗರ್ಭಿಣಿ ಮಹಿಳೆಯಿದ್ದು ಅವರ ಬಗ್ಗೆ ವಿಶೇಷ ಗಮನ ಹರಿಸಿದ್ದೇವೆ‘ ಎಂದೂ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.