ADVERTISEMENT

ಅಂಕಿತಾ ಹತ್ಯೆ: ಪ್ರಕರಣ ಸಿಬಿಐಗೆ ವಹಿಸಲು ತಂದೆ ಆಗ್ರಹ

ಪಿಟಿಐ
Published 18 ಅಕ್ಟೋಬರ್ 2022, 14:11 IST
Last Updated 18 ಅಕ್ಟೋಬರ್ 2022, 14:11 IST
ಅಂಕಿತಾ ಭಂಡಾರಿ
ಅಂಕಿತಾ ಭಂಡಾರಿ   

ಡೆಹ್ರಾಡೂನ್: ರೆಸಾರ್ಟ್‌ವೊಂದರ ಸ್ವಾಗತಕಾರಿಣಿ ಅಂಕಿತಾ ಭಂಡಾರಿ ಅವರ ಹತ್ಯೆಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಅಂಕಿತಾ ತಂದೆ ವೀರೇಂದ್ರ ಸಿಂಗ್ ಭಂಡಾರಿ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಒತ್ತಾಯಿಸಿದ್ದಾರೆ.

ಡಿಐಜಿ ಪಿ. ರೇಣುಕಾ ದೇವಿ ನೇತೃತ್ವದಲ್ಲಿ ಎಸ್‌ಐಟಿ ತಂಡ ಸೆ. 25ರಿಂದ ಪ್ರಕರಣದ ತನಿಖೆ ಕೈಗೊಂಡಿದೆ. ಪ್ರಕರಣ ಸಂಬಂಧ ಶೀಘ್ರದಲ್ಲೇ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಎಸ್‌ಐಟಿ ತನಿಖೆ ಬಗ್ಗೆ ವೀರೇಂದ್ರ ಸಿಂಗ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಸೋಮವಾರ ದೋಭ್‌ ಶ್ರೀಕೋಟ್‌ನಲ್ಲಿರುವ ಅಂಕಿತಾ ಮನೆಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ದೊರೆಕಿಸಿಕೊಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಯಾತ್ರೆ ಆರಂಭಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.