ADVERTISEMENT

ಬಂಗಾಳಿ ಜಾತಿ ಪ್ರಮಾಣಪತ್ರದಿಂದ ‘ಪೂರ್ವ ಪಾಕಿಸ್ತಾನ’ ಪದ ಬಳಕೆ ಕೈ ಬಿಟ್ಟ ಸರ್ಕಾರ

ಪಿಟಿಐ
Published 17 ಆಗಸ್ಟ್ 2021, 7:51 IST
Last Updated 17 ಆಗಸ್ಟ್ 2021, 7:51 IST
ಪುಷ್ಕರ್‌ಸಿಂಗ್ ಧಾಮಿ
ಪುಷ್ಕರ್‌ಸಿಂಗ್ ಧಾಮಿ   

ಡೆಹ್ರಾಡೂನ್: ಉತ್ತರಾಖಂಡಕ್ಕೆ ಸ್ಥಳಾಂತರಗೊಂಡಿರುವ ಬಂಗಾಳಿ ಸಮುದಾಯದ ಸದಸ್ಯರಿಗೆ ನೀಡಲಾಗುವ ಜಾತಿ ಪ್ರಮಾಣಪತ್ರದಲ್ಲಿ ‘ಪೂರ್ವ ಪಾಕಿಸ್ತಾನ’ ಎಂಬ ಪದ ಬಳಕೆಯನ್ನು ಕೈಬಿಡುವ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ತಿಂಗಳ ಆರಂಭದಲ್ಲಿ ಮುಖ್ಯಮಂತ್ರಿ ಪುಷ್ಕರ್‌ಸಿಂಗ್ ಧಾಮಿ ಅವರು ಈ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ.

ಈ ಮೂಲಕ ಉದ್ಧಮ್‌ ಸಿಂಗ್‌ ನಗರ ಜಿಲ್ಲೆಯಲ್ಲಿ ನೆಲೆಸಿರುವ ಬಂಗಾಳಿ ಸಮುದಾಯದವರ ದೀರ್ಘ ಕಾಲದ ಬೇಡಿಕೆಯನ್ನು ಈಡೇರಿಸಲಾಗಿದೆ.

ADVERTISEMENT

ಸಿತಾರಗಂಜ್‌ನ ಶಾಸಕ ಸೌರಬ್‌ ಬಹುಗುಣ, ಸಚಿವ ಅರವಿಂದ ಪಾಂಡೆ ಮತ್ತು ಬಂಗಾಳಿ ಮಹಾಸಭಾದ ಸದಸ್ಯರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ, ಧನ್ಯವಾದ ತಿಳಿಸಿದರು.

ಜಾತಿ ಪ್ರಮಾಣಪತ್ರದಿಂದ ಪೂರ್ವ ಪಾಕಿಸ್ತಾನ ಪದ ಬಳಕೆಯನ್ನು ತೆಗೆಯುವಂತೆ ಸಿತಾರಗಂಜ್‌ನ ಶಾಸಕ ಸೌರಬ್‌ ಬಹುಗುಣ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.