ADVERTISEMENT

ಜಮ್ಮು:ವೈಷ್ಣೋದೇವಿಗೆ ಸಾಗುವ ಮಾರ್ಗದಲ್ಲಿ ಭೂಕುಸಿತ; ಸಾವಿನ ಸಂಖ್ಯೆ 32ಕ್ಕೆ ಏರಿಕೆ

ಪಿಟಿಐ
Published 27 ಆಗಸ್ಟ್ 2025, 7:41 IST
Last Updated 27 ಆಗಸ್ಟ್ 2025, 7:41 IST
   

ಜಮ್ಮು: ಮಾತಾ ವೈಷ್ಣೋದೇವಿ ಯಾತ್ರೆ ಸಾಗುವ ರಿಯಾಸಿ ಜಿಲ್ಲೆಯ ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗುಡ್ಡ ಕುಸಿದು, ಕಲ್ಲುಗಳು, ಬಂಡೆಗಳು ರಸ್ತೆ ಮೇಲೆ ಬಿದ್ದಿದ್ದವು, ಆ ಬಳಿಕ, ದೇವಾಲಯಕ್ಕೆ ಯಾತ್ರೆ ಸ್ಥಗಿತಗೊಳಿಸಲಾಯಿತು.

ಕತ್ರಾದಿಂದ ದೇಗುಲಕ್ಕೆ ಹೋಗುವ 12 ಕಿ.ಮೀ. ಹಾದಿಯಲ್ಲಿ ಅರ್ಧದಾರಿಯಲ್ಲಿ ಭೂಕುಸಿತ ಸಂಭವಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.