ADVERTISEMENT

ಬರಲಿವೆ ವಂದೇ ಭಾರತ್‌ ಸ್ಲೀಪರ್‌ ರೈಲುಗಳು

ರೈಲುಗಳ ತಯಾರಿಗೆ ಕಾರ್ಯಾದೇಶ ನೀಡಿದ ಇಲಾಖೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 19:27 IST
Last Updated 31 ಮಾರ್ಚ್ 2023, 19:27 IST
   

ನವದೆಹಲಿ: ಲಾತೂರಿನಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ 120 ಸ್ಲೀಪರ್ ರೇಕ್‌ಗಳನ್ನು ತಯಾರಿಸಲು ಅಗತ್ಯ ಸಿದ್ಧತೆಗಳನ್ನು ಆರಂಭಿಸಲು ರಷ್ಯನ್‌ ಕಂಪನಿ ಟ್ರಾನ್ಸ್‌ಮ್ಯಾಷ್‌ ಹೋಲ್ಡಿಂಗ್‌ಗೆ (ಟಿಎಂಎಚ್‌) ಭಾರತೀಯ ರೈಲ್ವೆ ಕಾರ್ಯಾದೇಶ ಪತ್ರ ನೀಡಿದೆ.

ರೈಲ್ವೆ ಸ್ಟೋರ್ಸ್‌ನ ಕಾರ್ಯನಿರ್ದೇಶಕರು ಮಾರ್ಚ್‌ 29ರಂದು ನೀಡಿದ ಪತ್ರದಲ್ಲಿ, ಇದರೊಂದಿಗೆ ಒಪ್ಪಂದ ಪೂರ್ಣಗೊಳ್ಳುತ್ತದೆ ಎಂದಿದ್ದಾರೆ.

200 ವಂದೇ ಭಾರತ್‌ ರೈಲುಗಳಿಗೆ ಸ್ಲೀಪರ್‌ ಕೋಚ್ ತಯಾರಿಸುವ ಹಾಗೂ ನಿರ್ವಹಿಸುವ ಯೋಜನೆಗೆ ರೈಲ್ವೆ ಸಾರ್ವಜನಿಕ ಸ್ವಾಮ್ಯದ ಕಂಪನಿ ರೈಲ್‌ ವಿಕಾಸ್‌ ನಿಗಮ್‌ ಲಿಮಿಟೆಡ್‌ (ಆರ್‌ವಿಎನ್‌ಎಲ್‌) ಹಾಗೂ ರಷ್ಯಾದ ಬಹುದೊಡ್ಡ ರೋಲಿಂಗ್‌ ಸ್ಟಾಕ್‌ ತಯಾರಕರ ಒಕ್ಕೂಟ ಟ್ರಾನ್ಸ್‌ಮ್ಯಾಷ್‌ ಹೋಲ್ಡಿಂಗ್‌ ₹58 ಸಾವಿರ ಕೋಟಿ ಮೊತ್ತದ ಅತಿ ಕಡಿಮೆ ಮೊತ್ತದ ಬಿಡ್ಡರ್ ಆಗಿ ಹೊರ ಹೊಮ್ಮಿದೆ. ಈ ಒಕ್ಕೂಟವು ಉಕ್ಕಿನ ಬಾಡಿ ಹೊಂದಿರುವ ಪ್ರತಿ ರೈಲಿಗೆ ₹120 ಕೋಟಿ ಬಿಡ್‌ ಮಾಡಿತ್ತು ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಟೆಂಡರ್‌ ದಾಖಲೆಗಳ ಪ್ರಕಾರ, 120 ರೈಲುಗಳನ್ನು ಲಾತೂರಿನಲ್ಲಿರುವ ಭಾರತೀಯ ರೈಲ್ವೆಯ ಸೌಲಭ್ಯದಲ್ಲಿ ತಯಾರಿಸಲಾಗುವುದು. ಉಳಿದ 80 ರೈಲುಗಳನ್ನು ಚೆನ್ನೈನಲ್ಲಿ ತಯಾರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.