ADVERTISEMENT

ವರವರರಾವ್‌ ಚಿಕಿತ್ಸೆಯ ಅವಧಿ ಜ.7 ರವರೆಗೆ ವಿಸ್ತರಣೆ

ಪಿಟಿಐ
Published 21 ಡಿಸೆಂಬರ್ 2020, 14:17 IST
Last Updated 21 ಡಿಸೆಂಬರ್ 2020, 14:17 IST
ವರವರರಾವ್‌
ವರವರರಾವ್‌   

ಮುಂಬೈ: ಕವಿ, ಸಾಮಾಜಿಕ ಹೋರಾಟಗಾರ ವರವರ ರಾವ್‌ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅವಧಿಯನ್ನು ಜನವರಿ 7ವರೆಗೆ ಮುಂಬೈ ಹೈಕೋರ್ಟ್ ಸೋಮವಾರ ವಿಸ್ತರಿಸಿದೆ.

ಎಲ್ಗಾರ್‌ ಪರಿಷತ್‌ ಪ್ರಕರಣ ಹಾಗೂ ನಕ್ಸಲರ ಜತೆ ನಂಟು ಹೊಂದಿದ ಪ್ರಕರಣದಲ್ಲಿ ವರವರ ರಾವ್‌ ಆರೋಪಿಯಾಗಿದ್ದಾರೆ.

ಕಳೆದ ತಿಂಗಳಿನಿಂದ ವರವರರಾವ್‌ ಅವರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಎಸ್ ಶಿಂಧೆ ಮತ್ತು ಎಂ.ಎಸ್ ಕಾರ್ಣಿಕ್‌ ಅವರಿದ್ದ ನ್ಯಾಯಪೀಠ, ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ.

ADVERTISEMENT

ರಾವ್ ಅವರ ಆರೋಗ್ಯ ಸ್ಥಿತಿಯ ಹೊಸ ವೈದ್ಯಕೀಯ ವರದಿಯನ್ನು ಮುಂದಿನ ವಿಚಾರಣೆಯ ದಿನಾಂಕದೊಳಗೆ ಸಲ್ಲಿಸುವಂತೆ ನ್ಯಾಯಪೀಠ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.

‘ರಾವ್‌ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ.ಆದರೆ, ಅವರ ರಕ್ತದೊತ್ತಡ ಏರಿಳಿತಗೊಳ್ಳುತ್ತಿದ್ದು, ಆಸ್ಪತ್ರೆಯ ಸಿಬ್ಬಂದಿ ನಿಗಾ ವಹಿಸುತ್ತಿದ್ದಾರೆ’ ಎಂದು ಅವರ ವಕೀಲ ಆನಂದ್‌ ಗ್ರೋವರ್‌ ಅವರು ನ್ಯಾಯಾಲಕ್ಕೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.