
ಜ್ಯೋತಿರಾದಿತ್ಯ ಸಿಂಧಿಯಾ
ಇಂದೋರ್: ವಿಬಿ–ಜಿ–ರಾಮ್ ಜಿ ಮಸೂದೆಯು ದೇಶದ ಹಿತಾಸಕ್ತಿ. ನರೇಗಾ ಕಾಯ್ದೆಯಡಿಯಲ್ಲಿ ಫಲಾನುಭವಿಗಳ ಕೂಲಿ ಹಣವನ್ನು ಲೂಟಿ ಮಾಡುತ್ತಿದ್ದವರಿಗಷ್ಟೇ ಮಸೂದೆಯ ಅನುಷ್ಠಾನದಿಂದ ನೋವಾಗಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.
ಹೊಸ ಮಸೂದೆಯು ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಇದರಿಂದ ರೈತರು ಮತ್ತು ಯುವಜನರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟೀಕೆಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ಅವರು ‘ಅವರು ವಿರೋಧ ಪಕ್ಷಗಳ ನಾಯಕರಾಗಿದ್ದರೆ ಕನಿಷ್ಠ ಸಂಸತ್ತಿನಲ್ಲಿ ಇರಬೇಕು’ ಎಂದು ಹೇಳಿದರು.
‘ಕಾಂಗ್ರೆಸ್ ನರೇಗಾ ಯೋಜನೆ ಜಾರಿ ಮಾಡಿದಾಗ ₹10000 ಕೋಟಿಯನ್ನೂ ಮೀಸಲಿಡುತ್ತಿರಲಿಲ್ಲ. ಆದರೆ ವಿಬಿ–ಜಿ–ರಾಮ್ ಜಿ ಮಸೂದೆಯು ₹1 ಲಕ್ಷ ಕೋಟಿಗಿಂತ ಅಧಿಕ ಹಣವನ್ನು ಒದಗಿಸುತ್ತಿದೆ. ಇದು ಗ್ರಾಮೀಣ ಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.