ಕಣ್ಣೂರು: ಇಡೀ ಜಗತ್ತು ಕಮ್ಯುನಿಸಂ ಅನ್ನು ತಿರಸ್ಕರಿಸಿದೆ. ಸದ್ಯದಲ್ಲೇ ಕೇರಳ ಸೇರಿದಂತೆ ಎಲ್ಲೆಡೆ ಕಮ್ಯುನಿಸಂ ಮತ್ತು ಕಮ್ಯುನಿಸ್ಟ್ ಪಕ್ಷಗಳು ಇತಿಹಾಸದ ಕಸದ ಬುಟ್ಟಿ ಸೇರಲಿವೆ ಎಂದು ಸಂಸದ ಮತ್ತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ಮಾತನಾಡಿದ ಅವರು, ಸಂಪೂರ್ಣ ಜಗತ್ತು ಕಮ್ಯುನಿಸಂ ಅನ್ನು ತಿರಸ್ಕರಿಸಿದೆ. ಒಂದು ಕಾಲದಲ್ಲಿ ಕಮ್ಯುನಿಸಂನ ಗಂಗೋತ್ರಿಯಾಗಿದ್ದ ಚೀನಾದಲ್ಲೂ ಈಗ ಅದನ್ನು ತಿರಸ್ಕರಿಸಲಾಗಿದೆ. ಅದೊಂದು ಅಪ್ರಾಯೋಗಿಕ ಮತ್ತು ವಿಫಲ ಸಿದ್ಧಾಂತವಾಗಿದೆ. ಕಮ್ಯುನಿಸಂ ಈಗಲೂ ಬದುಕಿರುವ ಏಕೈಕ ದ್ವೀಪ ಕೇರಳ’ಎಂದು ಹೇಳಿದ್ದಾರೆ.
ಆದರೆ, ಕೇರಳದ ಯುವ ಸಮುದಾಯ ಬದಲಾವಣೆಗೆ ತೋರುತ್ತಿರುವ ಆಸಕ್ತಿ, ಶಕ್ತಿಯನ್ನು ಗಮನಿಸಿದರೆ, ಕೇರಳದಲ್ಲಿ ಅತ್ಯಂತ ಶೀಘ್ರ ಕಮ್ಯುನಿಸಂ ಮತ್ತು ಕಮ್ಯುನಿಸ್ಟ್ ಪಕ್ಷಗಳು ಇತಿಹಾಸದ ಕಸದ ಬುಟ್ಟಿಗೆ ಸೇರಲಿವೆ ಎಂದು ಬರೆದು ಕೊಡುತ್ತೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.