ADVERTISEMENT

ನಟಿ ವಿಜಯಶಾಂತಿ ಶೀಘ್ರ ಬಿಜೆಪಿಗೆ

ಪಿಟಿಐ
Published 23 ನವೆಂಬರ್ 2020, 10:36 IST
Last Updated 23 ನವೆಂಬರ್ 2020, 10:36 IST
ವಿಜಯಶಾಂತಿ
ವಿಜಯಶಾಂತಿ   

ಹೈದರಾಬಾದ್‌: ಕಾಂಗ್ರೆಸ್‌ನ ಹಿರಿಯ ನಾಯಕಿ, ನಟಿ ವಿಜಯಶಾಂತಿ ಅವರು ಶೀಘ್ರದಲ್ಲಿಯೇ ಬಿಜೆಪಿಗೆ ಸೇರಲಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ಮಾಜಿ ಸಂಸದೆಯೂ ಆದ ಅವರು ಕೆಲ ದಿನಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿಲ್ಲ.

ಒಂದು ವೇಳೆ ಅವರು ಬಿಜೆಪಿಗೆ ಸೇರ್ಪಡೆಯಾದ್ದಲ್ಲಿ, ಖುಷ್ಬೂ ಬಳಿಕ ಬಿಜೆಪಿಗೆ ಸೇರಿದ ದಕ್ಷಿಣದ ಎರಡನೇ ನಟಿಎನಿಸಿಕೊಳ್ಳುತ್ತಾರೆ. ನಟಿ ಖುಷ್ಬೂ ಅವರೂ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಡಿಸೆಂಬರ್‌ 1ರಂದು ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆಗೆ (ಜಿಎಚ್‌ಎಂಸಿ) ಚುನಾವಣೆ ನಡೆಯಲಿದ್ದು, ನಟಿಯ ಸೇರ್ಪಡೆ ಬಿಜೆಪಿಗೆ ಬಲ ನೀಡಲಿದೆ ಎನ್ನಲಾಗಿದೆ.

ADVERTISEMENT

ವಿಜಯಶಾಂತಿ ಅವರು ದೆಹಲಿಗೆ ತೆರಳಿ, ಅಲ್ಲಿ ಅಲ್ಲಿ ಅಮಿತ್‌ ಶಾ ಸಮ್ಮುಖದಲ್ಲಿ ಪಕ್ಷ ಸೇರುವರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.