ADVERTISEMENT

ನೌಕಾದಳ ಮುಖ್ಯಸ್ಥರ ನೇಮಕಾತಿ: ನ್ಯಾಯಮಂಡಳಿಗೆ ವೈಸ್‌ ಅಡ್ಮಿರಲ್‌ ವಿಮಲ್‌ ವರ್ಮಾ

ಸೇವಾ ಹಿರಿತನದ ಪ್ರಶ್ನೆ

ಏಜೆನ್ಸೀಸ್
Published 8 ಏಪ್ರಿಲ್ 2019, 11:58 IST
Last Updated 8 ಏಪ್ರಿಲ್ 2019, 11:58 IST
ವೈಸ್‌ ಅಡ್ಮಿರಲ್‌ ವಿಮಲ್‌ ವರ್ಮಾ
ವೈಸ್‌ ಅಡ್ಮಿರಲ್‌ ವಿಮಲ್‌ ವರ್ಮಾ   

ನವದೆಹಲಿ:ಸೇವಾ ಹಿರಿತನವನ್ನು ಹಿಂದಿಟ್ಟು ಮುಂದಿನ ನೌಕಾಪಡೆಯ ಮುಖ್ಯಸ್ಥರಾಗಿವೈಸ್‌ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಅವರನ್ನು ನೇಮಕ ಮಾಡಿರುವ ವಿಚಾರವಾಗಿ ವೈಸ್‌ಅಡ್ಮಿರಲ್‌ ವಿಮಲ್‌ ವರ್ಮಾ ಸಶಸ್ತ್ರ ಪಡೆಗಳ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ.

ವೈಸ್‌ ಅಡ್ಮಿರಲ್‌ ವಿಮಲ್‌ ವರ್ಮಾ ಪ್ರಸ್ತುತಅಂಡಮಾನ್‌ ಮತ್ತು ನಿಕೋಬಾರ್‌ನ ಚೀಫ್‌ ಕಮಾಂಡರ್‌ ಆಗಿದ್ದಾರೆ. ನೌಕಾ ಪಡೆಯ ಮಾಜಿ ಮುಖ್ಯಸ್ಥ ನಿರ್ಮಲ್‌ ವರ್ಮಾ ಅವರಿಗೆ ವಿಮಲ್‌ ಕಿರಿಯ ಸಹೋದರ.

ಮೂರು ವರ್ಷ ನೌಕಾಪಡೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಅಡ್ಮಿರಲ್‌ ಸುನೀಲ್‌ ಲಾಂಬಾ ಮೇ 31ರಂದು ನಿವೃತ್ತರಾಗಲಿದ್ದಾರೆ. 24ನೇ ನೌಕಾ ಪಡೆಯ ಮುಖ್ಯಸ್ಥರಾಗಿ ವೈಸ್‌ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಅವರನ್ನು ನೇಮಕ ಮಾಡಿಸರ್ಕಾರ ಕಳೆದತಿಂಗಳು ಪ್ರಕಟಿಸಿದೆ.

ADVERTISEMENT

ಆದರೆ, ಸೇನಾ ಹಿರಿತದ ಆಧಾರದ ಮೇಲೆವೈಸ್ಅಡ್ಮಿರಲ್‌ ವಿಮಲ್‌ ವರ್ಮಾನೌಕಾಪಡೆಯ ಉನ್ನತ ಹುದ್ದೆ ಅಲಂಕರಿಸಬೇಕಿತ್ತು. ಸಿಂಗ್‌ ಅವರಿಗಿಂತ ವರ್ಮಾ ಸೇವಾ ಹಿರಿತನ ಹೊಂದಿದ್ದಾರೆ. ಸೇನಾ ಹಿರಿತನ ಪರಿಗಣಿಸದೆಯೇ ಸರ್ಕಾರ ಮಾಡಿರುವ ನೇಮಕವನ್ನು ವಿಮಲ್‌ ವರ್ಮಾಸಶಸ್ತ್ರ ಪಡೆಗಳ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದ್ದಾರೆ.

2016ರಲ್ಲಿ ಸೇನಾ ಸಿಬ್ಬಂದಿಗಳ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌ ಅವರನ್ನು ನೇಮಕ ಮಾಡುವಾಗಲೂ ಸರ್ಕಾರ ಸೇವಾ ಹಿರಿತನವನ್ನು ಬದಿಗೊತ್ತಿ, ನೇಮಕಾತಿ ಆದೇಶ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.