ನೈನಿತಾಲ್: ಇಲ್ಲಿಯ ಕುಮಾವೂ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಆರೋಗ್ಯದಲ್ಲಿ ಏರುಪೇರಾಗಿ ಕುಸಿದು ಬಿದ್ದರು. ಕೂಡಲೇ ಅವರು ಚೇತರಿಸಿಕೊಂಡರು.
ತಮ್ಮ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದ ಧನಕರ್ ಅವರು, ಪ್ರೇಕ್ಷಕರೊಂದಿಗೆ ಕುಳಿತಿದ್ದ ಮಾಜಿ ಸಂಸದ ಮಹೇಂದ್ರ ಸಿಂಗ್ ಪಾಲ್ ಅವರನ್ನು ಭೇಟಿಯಾದರು.
ಇಬ್ಬರೂ ಭಾವುಕರಾಗಿ ಮಾತನಾಡಿದರು. ಪಾಲ್ ಅವರನ್ನು ಅಪ್ಪಿಕೊಂಡಿದ್ದ ಧನಕರ್ ಅವರು ಪ್ರಜ್ಞಾಹೀನರಾಗಿ ಕುಸಿದರು. ತಕ್ಷಣವೇ ವೈದ್ಯಕೀಯ ತಂಡವು ಅವರಿಗೆ ಚಿಕಿತ್ಸೆ ನೀಡಿತು. ಚೇತರಿಸಿಕೊಂಡ ಬಳಿಕ ಅವರು ರಾಜಭವನಕ್ಕೆ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.