ADVERTISEMENT

ಜಯಪ್ರಕಾಶ್‌ ನಾರಾಯಣ ಜನ್ಮ ದಿನಾಚರಣೆ: ಉಪರಾಷ್ಟ್ರಪತಿಯಿಂದ ಗೌರವ

ಪಿಟಿಐ
Published 11 ಅಕ್ಟೋಬರ್ 2020, 7:08 IST
Last Updated 11 ಅಕ್ಟೋಬರ್ 2020, 7:08 IST
ಜಯಪ್ರಕಾಶ್‌ ನಾರಯಣ
ಜಯಪ್ರಕಾಶ್‌ ನಾರಯಣ   

ನವದೆಹಲಿ: ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ್‌ ನಾರಾಯಣ ಅವರ ಜನ್ಮ ದಿನಾಚರಣೆಯ ಅಂಗವಾಗಿ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಭಾನುವಾರ ಜೆ.ಪಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಲೋಕ ನಾಯಕ (ಜನರ ನಾಯಕ) ಮತ್ತು ಜೆ.ಪಿ ಎಂದು ಪ್ರಸಿದ್ಧರಾಗಿರುವ ಜಯಪ್ರಕಾಶ್‌ ನಾರಾಯಣ‌ ಅವರು ಬಿಹಾರದ ಸರಾನ್‌ನಲ್ಲಿ 1902ರ ಅಕ್ಟೋಬರ್‌ 11ರಂದು ಜನಿಸಿದರು.

‘ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಪ್ರಸಿದ್ಧ ನಾಯಕರಲ್ಲಿ ಒಬ್ಬರಾದ ಲೋಕನಾಯಕ ಜಯಪ್ರಕಾಶ್ ನಾರಾಯಣ‌ ಅವರ ಜನ್ಮ ದಿನಾಚರಣೆಯಂದು ನಾನು ವಿನಮ್ರ ಗೌರವ ಅರ್ಪಿಸುತ್ತೇನೆ. ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಭ್ರಷ್ಟಾಚಾರದ ವಿರುದ್ಧದ ಅವರ ಹೋರಾಟವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಅವರ ಹೋರಾಟವು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ ಎಂದು ನಾಯ್ಡು ಅವರು ಬಣ್ಣಿಸಿದ್ದಾರೆ’ ಎಂದು ಉಪರಾಷ್ಟ್ರಪತಿ ಸಚಿವಾಲಯ ಟ್ವೀಟ್‌ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.