ADVERTISEMENT

ಕರೂರಿನಲ್ಲಿ ವಿಜಯ್ ನಡೆಸಿದ ರ್‍ಯಾಲಿಯಲ್ಲಿ ನಿಯಮ ಉಲ್ಲಂಘನೆಯ ವಿಡಿಯೊ ಬಿಡುಗಡೆ

ಪಿಟಿಐ
Published 30 ಸೆಪ್ಟೆಂಬರ್ 2025, 15:50 IST
Last Updated 30 ಸೆಪ್ಟೆಂಬರ್ 2025, 15:50 IST
ತಮಿಳು ನಟ ವಿಜಯ್
ತಮಿಳು ನಟ ವಿಜಯ್   

ಚೆನ್ನೈ: ಚಿತ್ರನಟ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ವಿಜಯ್ ಅವರು ಕರೂರಿನಲ್ಲಿ ನಡೆಸಿದ ರ‍್ಯಾಲಿಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಟಿವಿಕೆ ಪಕ್ಷ ಆಯೋಜಿಸಿದ್ದ ಬೃಹತ್ ರ‍್ಯಾಲಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ವಿಡಿಯೊ ಕ್ಲಿಪ್‌ಗಳನ್ನು ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ.

ನಿರೀಕ್ಷಿಸಿದ್ದ ಜನರಿಗಿಂತ ದುಪ್ಪಟ್ಟು ಮಂದಿ ಜಮಾಯಿಸಿದ್ದರಿಂದ, ಸಾಕಷ್ಟು ಸಮಸ್ಯೆಗಳು ಎದುರಾದವು. ಪ್ರಾಣಹಾನಿಯೂ ಆಗಿದೆ ಎಂದಿದೆ.

ADVERTISEMENT

ಕಾಲ್ತುಳಿತ ಘಟನೆಗೆ ಸಂಬಂಧಿಸಿದ ಕೆಲವು ಸಂಗತಿಗಳ ವಿಡಿಯೊ ಕ್ಲಿಪ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸಿದ್ದು, ಮಾಧ್ಯಮಗಳಿಗೂ ಬಿಡುಗಡೆ ಮಾಡಿದೆ. ಹಲವು ವಿಷಯಗಳ ಕುರಿತಂತೆ ತನ್ನ ಅಭಿಪ್ರಾಯವನ್ನು ವಿವರಿಸಿದೆ.

ನಟ ವಿಜಯ್ ಅವರು ಕಾಲ್ತುಳಿತ ದುರಂತದ ಬಗ್ಗೆ ತಮ್ಮ ನಿಲುವನ್ನು ವಿವರಿಸುವ ವಿಡಿಯೊ ಬಿಡುಗಡೆ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಸರ್ಕಾರವು ಕೆಲವು ವಿಡಿಯೊ ಕ್ಲಿಪ್ಪಿಂಗ್‌ಗಳನ್ನು ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.