ADVERTISEMENT

300 ಬ್ಯಾಗ್‌ಗಳೊಂದಿಗೆ ಸಭೆಗೆ ಹೋಗುತ್ತಾರೆಯೇ?

ವಿಜಯ ಮಲ್ಯ ವಕೀಲರಿಗೆ ಜಾರಿ ನಿರ್ದೇಶನಾಲಯ ಪ್ರಶ್ನೆ

ಪಿಟಿಐ
Published 12 ಡಿಸೆಂಬರ್ 2018, 17:57 IST
Last Updated 12 ಡಿಸೆಂಬರ್ 2018, 17:57 IST

ಮುಂಬೈ: ‘300 ಬ್ಯಾಗ್‌ಗಳೊಂದಿಗೆಯಾರಾದರೂ ಸಭೆಗೆ ಹೋಗುತ್ತಾರೆಯೇ?’ ಎಂದು ಜಾರಿ ನಿರ್ದೇಶನಾಲಯದ ವಕೀಲರು ಉದ್ಯಮಿ ವಿಜಯ ಮಲ್ಯ ಪರ ವಕೀಲರಿಗೆ ಪ್ರಶ್ನಿಸಿದೆ.

ವಿಜಯ ಮಲ್ಯ ಅವರು 2016ರ ಮಾರ್ಚ್‌ನಲ್ಲಿ ಜಿನಿವಾದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಜಾರಿ ನಿರ್ದೇಶನಾಲಯ ಪ್ರತಿಪಾದಿಸಿದಂತೆ ರಹಸ್ಯವಾಗಿ ಭಾರತ ತೊರೆದಿಲ್ಲ ಎಂದು ಮಂಗಳವಾರ ಮಲ್ಯ ಪರ ವಕೀಲರ ಅಮಿತ್‌ ದೇಸಾಯಿ ಪ್ರತಿಪಾದಿಸಿದ್ದರು.

ಬುಧವಾರ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಪ್ರತಿವಾದ ನಡೆಸಿದ ಜಾರಿ ನಿರ್ದೇಶನಾಲಯದ ವಕೀಲ ಡಿ.ಎನ್‌. ಸಿಂಗ್‌, ‘ಸಭೆಯಲ್ಲಿ ಪಾಲ್ಗೊಂಡಿದ್ದಕ್ಕೆ ಯಾವುದೇ ರೀತಿಯ ದಾಖಲೆಗಳನ್ನು ನೀಡಿಲ್ಲ. 300 ಬ್ಯಾಗ್‌ಗಳೊಂದಿಗೆ ಯಾರಾದರೂ ಹೋಗುತ್ತಾರೆಯೇ’ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.