ADVERTISEMENT

ಆಸ್ಕರ್‌ಗೆ ‘ವಿಲೇಜ್ ರಾಕ್‌ಸ್ಟಾರ್’ ನಾಮನಿರ್ದೇಶನ

ಪಿಟಿಐ
Published 22 ಸೆಪ್ಟೆಂಬರ್ 2018, 20:33 IST
Last Updated 22 ಸೆಪ್ಟೆಂಬರ್ 2018, 20:33 IST
Village Rockstars
Village Rockstars   

ಮುಂಬೈ: 91ನೇ ಅಕಾಡೆಮಿ ಅವಾರ್ಡ್‌ನಲ್ಲಿ (ಆಸ್ಕರ್) ವಿದೇಶಿ ಭಾಷೆಯ ವಿಭಾಗದಲ್ಲಿ ರಿಮಾ ದಾಸ್ ಅವರ ‘ವಿಲೇಜ್‌ ರಾಕ್‌ಸ್ಟಾರ್’ ಚಿತ್ರವು ಭಾರತವನ್ನು ಪ್ರತಿನಿಧಿಸಲಿದೆ.

ಭಾರತೀಯ ಫಿಲ್ಮ್ ಫೆಡರೇಷನ್‌ನ (ಎಫ್‌ಎಫ್‌ಐ) ‘ಆಸ್ಕರ್ ಪ್ರಶಸ್ತಿ ಆಯ್ಕೆ ಸಮಿತಿ’ಯ ಮುಖ್ಯಸ್ಥ ಎಸ್‌.ವಿ. ರಾಜೇಂದ್ರಸಿಂಗ್ ಬಾಬು ಅವರು ಇದನ್ನು ಪ್ರಕಟಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ಈ ಚಿತ್ರವು 2017ರ ಟೊರಾಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆ ಪಾತ್ರವಾಗಿತ್ತು. ಅಲ್ಲದೇ 70ಕ್ಕೂ ಹೆಚ್ಚು ಅಂತರರಾಷ್ಟ್ರೀಯ, ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ತೆರೆ ಕಂಡಿದೆ.

ADVERTISEMENT


ಅಸ್ಸಾಮಿನ ಧನು ಎಂಬ ಬಡ ಹುಡುಗಿಯ ಸುತ್ತ ಹೆಣೆದ ಕತೆಯೇ ವಿಲೇಜ್ ರಾಕ್‌ಸ್ಟಾರ್. ಗಿಟಾರ್ ಕೊಂಡು, ರಾಕ್ ಬ್ಯಾಂಡ್‍ನಲ್ಲಿ ಮಿಂಚಬೇಕು ಎಂಬ ಅದಮ್ಯ ಕನಸು ಹೊತ್ತು, ಅದನ್ನು ಸಾಧ್ಯವಾಗಿಸಿಕೊಂಡ ಕತೆ ಇದು.

ಪದ್ಮಾವತ್, ರಾಝಿ, ಹಿಚ್ಕಿ, ಅಕ್ಟೊಬರ್, ಲವ್ ಸೋನಿಯಾ, ಹಲ್ಕಾ, ಕಡ್ವಿ ಹವಾ, ಮಾಂಟೊ ಸೇರಿದಂತೆ 28 ಚಿತ್ರಗಳು ಪಟ್ಟಿಯಲ್ಲಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.