ADVERTISEMENT

ಬೆಂಗಳೂರು–ಹೈದರಾಬಾದ್‌ ನಡುವೆಯೂ ಮನೆ ಮನೆಗೆ ಲಗೇಜ್‌ ಸೇವೆ: ವಿಸ್ತಾರಾ ಚಿಂತನೆ

ಪಿಟಿಐ
Published 31 ಮಾರ್ಚ್ 2021, 8:39 IST
Last Updated 31 ಮಾರ್ಚ್ 2021, 8:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಸ್ತಾರಾ ವಿಮಾನಯಾನ ಸಂಸ್ಥೆಯು ಬೆಂಗಳೂರು ಮತ್ತು ಹೈದರಾಬಾದ್‌ ನಡುವೆಯೂ ಮನೆಯಿಂದ ಮನೆಗೆ ಲಗೇಜ್‌ ರವಾನಿಸುವ ಸೇವೆ ಆರಂಭಿಸುವ ಚಿಂತನೆ ನಡೆಸಿದೆ.

‘ಮಾರ್ಚ್‌ 13ರಂದು ವಿಸ್ತಾರಾ ವಿಮಾನಯಾನ ಸಂಸ್ಥೆಯುಲಗೇಜ್‌ ವರ್ಗಾವಣೆ ಕಂಪನಿ ಕಾರ್ಟರ್‌ಎಕ್ಸ್‌ ಸಹಭಾಗಿತ್ವದಲ್ಲಿ ದೆಹಲಿ–ಮುಂಬೈ ವಿಮಾನಗಳಲ್ಲಿ ಲಗೇಜ್‌ ವಿತರಣೆ ಸೇೆವೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿದೆ. ಗ್ರಾಹಕರು ನೀಡಿದ ಅಭಿಪ‍್ರಾಯ ಮತ್ತು ವಿಮರ್ಶೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ಎರಡನೇ ಹಂತದಲ್ಲಿ ಹೈದರಾಬಾದ್‌ ಮತ್ತು ಬೆಂಗಳೂರಿಗೂ ವಿಸ್ತರಿಸುವ ಚಿಂತನೆ ನಡೆಸಲಾಗಿದೆ’ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

‘ಈ ಸೇವೆಯಡಿ ಗ್ರಾಹಕರ ಮನೆಯಿಂದ ಲಗೇಜ್‌ ಅನ್ನು ಸಂಗ್ರಹಿಸಲಾಗುತ್ತದೆ. ಬಳಿಕ ಅವುಗಳನ್ನು ಸ್ಯಾನಿಟೈಸ್‌ ಮಾಡಿ, ಪ್ಯಾಕ್‌ ಮಾಡಲಾಗುತ್ತದೆ. ಲಗೇಜ್‌ ತನ್ನ ಸರಿಯಾದ ಜಾಗವನ್ನು ತಲುಪುವ ತನಕ ಅದರ ಬಗ್ಗೆ ಸದಾ ಮೇಲ್ವಿಚಾರಣೆ ವಹಿಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.