ADVERTISEMENT

ಇ.ಡಿ ವಶಕ್ಕೆ ರಾಜೀವ್‌ ಸಕ್ಸೆನಾ

ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ

ಪಿಟಿಐ
Published 31 ಜನವರಿ 2019, 20:34 IST
Last Updated 31 ಜನವರಿ 2019, 20:34 IST
ರಾಜೀವ್‌ ಸಕ್ಸೆನಾ
ರಾಜೀವ್‌ ಸಕ್ಸೆನಾ   

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ದುಬೈ ಉದ್ಯಮಿ ರಾಜೀವ್‌ ಸಕ್ಸೆನಾ ಅವರನ್ನು ನಾಲ್ಕು ದಿನಗಳ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.

ದೆಹಲಿ ನ್ಯಾಯಾಲಯದ ಮುಂದೆ ಗುರುವಾರ ಸಕ್ಸೆನಾ ಅವರನ್ನು ಹಾಜರುಪಡಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂಟು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿದ್ದರು. ಬುಧವಾರ ದುಬೈ ಅಧಿಕಾರಿಗಳು ಸಕ್ಸೆನಾ ಅವರನ್ನು ವಶಕ್ಕೆ ಪಡೆದು ಭಾರತಕ್ಕೆ ಗಡಿಪಾರು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT