ADVERTISEMENT

ಪ್ರತಿ ಸಂಸ್ಥೆಯಲ್ಲೂ ಬಡವರು,ದುರ್ಬಲ ವರ್ಗದವರ ನಾಯಕತ್ವ ನೋಡಲು ಇಚ್ಛಿಸುವೆ: ರಾಹುಲ್

ಪಿಟಿಐ
Published 5 ಫೆಬ್ರುವರಿ 2025, 9:37 IST
Last Updated 5 ಫೆಬ್ರುವರಿ 2025, 9:37 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

–ಪಿಟಿಐ ಚಿತ್ರ

ಪಟ್ನಾ: ದೇಶದಾದ್ಯಂತ ಜಾತಿ ಗಣತಿಯ ಅಗತ್ಯವನ್ನು ಪುನರುಚ್ಚರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಭಾರತದ ಪ್ರತಿಯೊಂದು ಸಂಸ್ಥೆಯಲ್ಲೂ ದಲಿತರು ಮತ್ತು ದುರ್ಬಲ ವರ್ಗದವರು ನಾಯಕತ್ವ ಸ್ಥಾನ ಪಡೆದುಕೊಳ್ಳುವುದನ್ನು ನೋಡುವ ದಿನಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

ADVERTISEMENT

ಸ್ವಾತಂತ್ರ್ಯ ಹೋರಾಟಗಾರ ಮತ್ತು ದಲಿತ ನಾಯಕ ಜಗ್ಲಾಲ್ ಚೌಧರಿ ಅವರ ಜನ್ಮ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್, ದಲಿತರು ಮತ್ತು ದುರ್ಬಲರ ಹಕ್ಕುಗಳನ್ನು ಖಾತರಿಪಡಿಸುವ ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದು ಆರೋಪಿಸಿದ್ದಾರೆ.

ದೇಶದ ಪ್ರಸ್ತುತ ಅಧಿಕಾರ ವರ್ಗದಲ್ಲಿ ಮತ್ತು ಸಂಸ್ಥೆಗಳಲ್ಲಿ ದಲಿತರು ಮತ್ತು ಬಡವರ್ಗಗಳ ಭಾಗವಹಿಸುವಿಕೆ ಇಲ್ಲ. ದಲಿತರು, ಅಲ್ಪಸಂಖ್ಯಾತರು ಮತ್ತು ಸಮಾಜದ ದುರ್ಬಲ ವರ್ಗಗಳ ನಿಖರವಾದ ಸಂಖ್ಯೆಯನ್ನು ಗುರುತಿಸಲು ಭಾರತದಾದ್ಯಂತ ಜಾತಿ ಗಣತಿಯ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ಮತದಾನ ಮಾಡಿ ಪಟ್ನಾಗೆ ಆಗಮಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೇಶದ ಪ್ರತಿಯೊಂದು ಸಂಸ್ಥೆಗಳಲ್ಲಿ ದಲಿತರು ಮತ್ತು ದುರ್ಬಲ ವರ್ಗದವರು ನಾಯಕತ್ವ ವಹಿಸಿಕೊಳ್ಳುವುದನ್ನು ನೋಡುವ ದಿನಕ್ಕಾಗಿ ಕಾಯುತ್ತಿದ್ದೇನೆ. ದುರ್ಬಲ ವರ್ಗದವರಿಗಾಗಿ ನನ್ನ ಹೋರಾಟ ಮುಂದುವರಿಸುತ್ತೇನೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.