ADVERTISEMENT

Bihar Polls 2025 | ವಕ್ಫ್‌ ಕಾಯ್ದೆ ರದ್ದತಿ: ತೇಜಸ್ವಿ ಯಾದವ್‌ ಭರವಸೆ

ಪಿಂಚಣಿ, ವಿಮೆ ಮೊತ್ತವು ಹೆಚ್ಚಳ: ಆರ್‌ಜೆಡಿ ನಾಯಕ ತೇಜಸ್ವಿ ಆಶ್ವಾಸನೆ

ಪಿಟಿಐ
Published 26 ಅಕ್ಟೋಬರ್ 2025, 9:24 IST
Last Updated 26 ಅಕ್ಟೋಬರ್ 2025, 9:24 IST
ತೇಜಸ್ವಿ ಯಾದವ್
ತೇಜಸ್ವಿ ಯಾದವ್   ಪಿಟಿಐ ಚಿತ್ರ

ಪಟ್ನಾ: ಬಿಹಾರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ವಕ್ಫ್‌ (ತಿದ್ದುಪಡಿ) ಕಾಯ್ದೆಯನ್ನು ರದ್ದುಪಡಿಸಲಾಗುವುದು ಎಂದು ತೇಜಸ್ವಿ ಯಾದವ್ ಹೇಳಿದರು.

ಮುಸ್ಲಿಮರ ಸಂಖ್ಯೆ ಹೆಚ್ಚು ಇರುವ ಪ್ರದೇಶಗಳಾದ ಕಟಿಹಾರ, ಕಿಶನ್‌ಗಂಜ್‌, ಅರಾರಿಯಾ ಜಿಲ್ಲೆಗಳಲ್ಲಿ ಸರಣಿ ಬಹಿರಂಗ ಸಭೆಗಳಲ್ಲಿ ಅವರು ಮಾತನಾಡಿದರು.

‘ನನ್ನ ತಂದೆ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಕೋಮುವಾದಿ ಶಕ್ತಿಗೊಳೊಂದಿಗೆ ಎಂದಿಗೂ ರಾಜಿ ಆಗಲಿಲ್ಲ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇಂತಹ ಶಕ್ತಿಗಳನ್ನು ಬೆಂಬಲಿಸಿದರು. ಹೀಗಾಗಿಯೇ ಆರ್‌ಎಸ್‌ಎಸ್‌ ಹಾಗೂ ಅದರ ಅಂಗಸಂಸ್ಥೆಗಳು ಬಿಹಾರ ಹಾಗೂ ದೇಶದ ಇತರೆಡೆ ಕೋಮುದ್ವೇಷ ಹರಡುತ್ತಿವೆ’ ಎಂದು ಟೀಕಿಸಿದರು.

ADVERTISEMENT

ಒಂದು ವೇಳೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ,  ಪಂಚಾಯಿತಿ ಪ್ರತಿನಿಧಿಗಳ ಮಾಸಿಕ ಭತ್ಯೆ, ಪಿಂಚಣಿ ಹಾಗೂ ವಿಮಾ ಮೊತ್ತಹೆಚ್ಚಿಸು ವುದಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಭಾನುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಂಚಾಯಿತಿ ಪ್ರತಿನಿಧಿಗಳ ವಿಮೆಯನ್ನು ₹50 ಲಕ್ಷಕ್ಕೆ ಹೆಚ್ಚಿಸಲಾಗುವುದು’ ಎಂದರು.

ಟೊಳ್ಳು ಭರವಸೆ: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ನೀಡಿರುವ ಭರವಸೆಗಳ ಕುರಿತು ಪ್ರತಿಕ್ರಿಯಿಸಿರುವ ಜೆಡಿಯು ವಕ್ತಾರ ನೀರಜ್‌ ಕುಮಾರ್,‘ಇವೆಲ್ಲ ಟೊಳ್ಳು ಭರವಸೆಗಳು ಎಂಬುದು ಬಿಹಾರ ಜನರಿಗೆ ಗೊತ್ತಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.