ADVERTISEMENT

ನೀರಿನಿಂದ ವಾಹನ ಚಾಲನೆ- ತಮಿಳುನಾಡು ಎಂಜಿನಿಯರ್ ಸಾಧನೆ

ಇದು ಮೊದಲು ಜಾರಿಗೆ ಬರುವುದು ಜಪಾನ್‌‌ನಲ್ಲಿ

​ಪ್ರಜಾವಾಣಿ ವಾರ್ತೆ
Published 11 ಮೇ 2019, 4:22 IST
Last Updated 11 ಮೇ 2019, 4:22 IST
ನೀರಿನಿಂದ ಎಂಜಿನ್ ಚಲಾಯಿಸುವ ಸಂಶೋಧಕ
ನೀರಿನಿಂದ ಎಂಜಿನ್ ಚಲಾಯಿಸುವ ಸಂಶೋಧಕ   

ತಮಿಳುನಾಡು: ವಾಹನಕ್ಕೆ ಬಳಸುವ ಎಂಜಿನ್ ಅನ್ನು ನೀರಿನಿಂದ ಚಾಲನೆ ಮಾಡಬಹುದಾದ ಸಂಶೋಧನೆಯಲ್ಲಿಕೊಯಮತ್ತೂರು ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಒಬ್ಬರು ಯಶಸ್ಸು ಸಾಧಿಸಿದ್ದಾರೆ.

ಇದು ಭಾರತದಲ್ಲಿ ಯಶಸ್ಸು ಕಂಡರೆ ಹಲವು ವರ್ಷಗಳಿಂದ ಪೆಟ್ರೋಲ್ ಹಾಗೂ ಇಂಧನಕ್ಕಿರುವ ಬೇಡಿಕೆ ತಗ್ಗುವಲ್ಲಿ ಸಹಕಾರಿಯಾಗಬಹುದು. ವಿಪರ್ಯಾಸವೆಂದರೆ, ಈ ಸಂಶೋಧನೆಯನ್ನು ಜಾರಿಗೆ ತರುತ್ತಿರುವುದು ಜಪಾನ್. ಸೌಂದರ್ಯರಾಜನ್ ಕುಮಾರಸ್ವಾಮಿ ಎಂಬ ಕೊಯಮತ್ತೂರು ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಈ ಸಾಧನೆಗೈದ ವ್ಯಕ್ತಿಯಾಗಿದ್ದಾರೆ.

ವಾಹನದಲ್ಲಿ ಅಳವಡಿಸಲಾಗುವ ಬ್ಯಾಟರಿಗೆ ಡಿಸ್ಟಿಲ್ಡ್ ವಾಟರ್ ಅನ್ನು ಬಳಸಲಾಗುತ್ತದೆ. ಇದೇ ನೀರನ್ನು ವಾಹನದ ಎಂಜಿನ್‌‌‌ಗೆ ಬಳಸಲಾಗುವ ಪೆಟ್ರೋಲ್ ಹಾಗೂ ಡೀಸೆಲ್‌‌ ಬದಲಾಗಿ ಬಳಸಬಹುದು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ಕುಮಾರಸ್ವಾಮಿಪ್ರಸ್ತುತಪಡಿಸಿದ್ದಾರೆ.

ADVERTISEMENT

'ಇದು ವಿಶ್ವದಲ್ಲಿಯೇ ಪ್ರಥಮ ಸಂಶೋಧನೆಯಾಗಿದೆ. ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಿದರೆ, ಅದು ಆಮ್ಲಜನಕವಾಗಿ ಪರಿವರ್ತನೆಯಾಗುತ್ತದೆ. ಇದು ಎಂಜಿನ್ ಚಾಲನೆಗೆ ಸಹಾಯ ಮಾಡುತ್ತದೆ.ನಾನು 10ವರ್ಷಗಳಿಂದ ಈ ಸಂಶೋಧನೆಯಲ್ಲಿ ತೊಡಗಿ ಯಶಸ್ಸು ಸಾಧಿಸಿದ್ದೇನೆ. ನೀರಿನಿಂದ ಎಂಜಿನ್ ಚಲನೆ ಮಾಡಬಹುದಾಗಿ ನಮ್ಮ ರಾಜ್ಯದಲ್ಲಿ ಹಾಗೂ ಭಾರತದ ಹಲವು ಕಡೆ ಎಲ್ಲಾ ವ್ಯಕ್ತಿಗಳನ್ನು ಭೇಟಿ ಮಾಡಿ ಹೇಳಿದೆ. ಆದರೆ, ಅವರಿಂದ ಯಾವುದೇ ರೀತಿಯ ಪೂರಕ ಪ್ರತಿಕ್ರಿಯೆ ಬರಲಿಲ್ಲ. ಆಗ ನಾನು ಜಪಾನ್ ಸರ್ಕಾರದ ಬಳಿ ನನ್ನ ಸಂಶೋಧನೆಯ ವಿವರಗಳನ್ನು ತಿಳಿಸಿದೆ. ನನ್ನ ಮನವಿ ಪರಿಶೀಲಿಸಿದ ಜಪಾನ್ ಸರ್ಕಾರ ಒಪ್ಪಿಕೊಂಡಿದೆ. ಮುಂದಿನ ದಿನಗಳಲ್ಲಿ ಜಪಾನ್‌‌ನಲ್ಲಿ ಸಂಸ್ಕರಿಸಿದ ನೀರಿನಿಂದ ವಾಹನ ಚಲಾಯಿಸುವ ಎಂಜಿನ್‌‌ಗಳನ್ನು ಕಾಣಬಹುದು'ಎಂದು ಕುಮಾರಸ್ವಾಮಿ ಹೇಳುತ್ತಾರೆ.

ಈ ಸಂಶೋಧನೆ ಯಶಸ್ಸು ಕಂಡರೆ ಭಾರತ ಇಂಧನದಲ್ಲಿ ಸ್ವಾವಲಂಬನೆ ಸಾಧಿಸಬಹುದು. ಆದರೆ, ಪೆಟ್ರೋಲ್, ಡೀಸೆಲ್ ತಯಾರಿಕಾ ಹಾಗೂ ವಿತರಕ ಕಂಪನಿಗಳು, ಅವರನ್ನು ನಂಬಿಕೊಂಡು ಕೋಟಿಗಟ್ಟಲೆ ಹಣ ಗಳಿಸುತ್ತಿರುವ ಖಾಸಗಿ ಸಂಸ್ಥೆಗಳು ನಷ್ಟ ಅನುಭವಿಸಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.