ADVERTISEMENT

‘ಮಹಾರಾಷ್ಟ್ರದ ಜಲಾಶಯಗಳಲ್ಲಿ ಶೇಕಡ 37ರಷ್ಟು ನೀರಿನ ಸಂಗ್ರಹ’

ಪಿಟಿಐ
Published 26 ಮೇ 2022, 12:43 IST
Last Updated 26 ಮೇ 2022, 12:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ (ಪಿಟಿಐ): ರಾಜ್ಯದ ಜಲಾಶಯಗಳಲ್ಲಿ ಪ್ರಸ್ತುತ ಶೇಕಡ 37ರಷ್ಟು ನೀರಿನ ಸಂಗ್ರಹವಿದ್ದು, ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಪ್ರದೇಶಗಳಿಗೆ 401 ಟ್ಯಾಂಕರ್‌ಗಳು ನೀರನ್ನು ಸರಬರಾಜು ಮಾಡುತ್ತಿವೆ ಎಂದು ಮಹಾರಾಷ್ಟ್ರದ ಸರ್ಕಾರ ತಿಳಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಕಚೇರಿ ‘ಸಾರ್ವಜನಿಕರಿಗೆ ನಿರಂತರವಾದ ನೀರು ಪೂರೈಕೆ ಹಾಗೂ ವಿತರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರತವಾಗಿದೆ’ ಎಂದು ತಿಳಿಸಿದೆ.

‘ರಾಜ್ಯದಾದ್ಯಂತ 455 ಗ್ರಾಮಗಳಿಗೆ ಹಾಗೂ 1,001 ಕುಗ್ರಾಮಗಳಿಗೆ ಒಟ್ಟು 401 ಟ್ಯಾಂಕರ್‌ಗಳ ಮೂಲಕ ನೀರನ್ನು ಪೂರೈಸಲಾಗಿದೆ. ಇಲ್ಲಿಯವರೆಗೆ ನಾಗಪುರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಅಗತ್ಯ ಎದುರಾಗಿಲ್ಲ’ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.