ADVERTISEMENT

ಭಾಷಾ ರಾಜಕೀಯ ಮಾಡಲು ನಾವು 60ರ ದಶಕದಲ್ಲಿಲ್ಲ: ಸ್ಟಾಲಿನ್ ವಿರುದ್ಧ ಮುರುಗನ್‌ ಕಿಡಿ

ಪಿಟಿಐ
Published 17 ಫೆಬ್ರುವರಿ 2025, 13:01 IST
Last Updated 17 ಫೆಬ್ರುವರಿ 2025, 13:01 IST
<div class="paragraphs"><p>ಕೇಂದ್ರ ಸಚಿವ ಎಲ್‌.ಮುರುಗನ್‌</p></div>

ಕೇಂದ್ರ ಸಚಿವ ಎಲ್‌.ಮುರುಗನ್‌

   

ಮಧುರೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಬಗ್ಗೆ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ. ಡಿಎಂಕೆ ಭಾಷೆಯ ಹೆಸರಿನಲ್ಲಿ ರಾಜಕೀಯ ಮಾಡಲು ನಾವು 60ರ ದಶಕದಲ್ಲಿ ಬದುಕುತ್ತಿಲ್ಲ ಎಂದು ಕೇಂದ್ರ ಸಚಿವ ಎಲ್‌.ಮುರುಗನ್‌ ಟೀಕಿಸಿದ್ದಾರೆ.

ತ್ರಿಭಾಷಾ ಸೂತ್ರ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಒಪ್ಪಿಕೊಳ್ಳುವವರೆಗೆ ತಮಿಳುನಾಡಿಗೆ ಅನುದಾನ ಒದಗಿಸಲಾಗದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಖಂಡಿಸಿದ್ದರು. ಇಂತಹ ಬೆದರಿಕೆಯು ಸ್ವೀಕಾರಾರ್ಹವಲ್ಲ. ತಮಿಳುನಾಡು ಇಂತಹದನ್ನು ಸಹಿಸುವುದೂ ಇಲ್ಲ ಎಂದು ಹೇಳಿದ್ದರು.

ADVERTISEMENT

ಸ್ಟಾಲಿನ್‌ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುರುಗನ್‌, ‘ಶನಿವಾರ ವಾರಾಣಸಿಯಲ್ಲಿ ನಡೆದ ಕಾಶಿ ತಮಿಳು ಸಂಗಮ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ತ್ರಿಭಾಷಾ ಸೂತ್ರ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಒಪ್ಪಿಕೊಳ್ಳುವವರೆಗೆ ತಮಿಳುನಾಡಿಗೆ ಅನುದಾನ ಒದಗಿಸಲಾಗದು ಎಂದು ಎಲ್ಲಿಯೂ ಹೇಳಿಲ್ಲ. ವಿಷಯವನ್ನು ಬೇರೆ ರೀತಿ ತಿರುಗಿಸಲು ಪ್ರಯತ್ನಿಸಲಾಗುತ್ತಿದೆ. ನಾವು1965ರಲ್ಲಿ ಬದುಕುತ್ತಿಲ್ಲ. ವಿಶೇಷವಾಗಿ ತಮಿಳುನಾಡಿನ ಜನರು ಪ್ರಗತಿಪರರು ಮತ್ತು ಅಭಿವೃದ್ಧಿಯನ್ನು ಬಯಸುತ್ತಾರೆ. 1965ರಲ್ಲಿ ಮಾಡಿದಂತೆ ಈಗ ಡಿಎಂಕೆ ಭಾಷಾ ರಾಜಕೀಯ ಮಾಡುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಡಿಎಂಕೆಗಿಂತ ಹೆಚ್ಚಾಗಿ ತಮಿಳು ಭಾಷೆಗೆ, ವಿಶೇಷವಾಗಿ ಅದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವತ್ತ ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ. ಮೋದಿ ಅವರಿಗೆ ಡಿಎಂಕೆಗಿಂತ ತಮಿಳುನಾಡಿನ ಬಗ್ಗೆ ಹೆಚ್ಚಿನ ಒಲವಿದೆ ಎಂದು ಮುರುಗನ್‌ ತಿಳಿಸಿದ್ದಾರೆ.

‘ನಮ್ಮ (ತಮಿಳು) ಯುವಕರನ್ನು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸುವ ಗುರಿ ಹೊಂದಿರುವ ಎನ್‌ಇಪಿಯನ್ನು ಜಾರಿಗೆ ತರುವಲ್ಲಿ ಏನು ಸಮಸ್ಯೆ’ ಎಂದು ಮುರುಗನ್‌ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.