ADVERTISEMENT

ನಾವು ರಾಬರ್ಟ್ ವಾದ್ರಾನನ್ನು ಜೈಲಿಗೆ ಹಾಕ್ತೀವಿ ಎಂದು ಹೇಳಿಲ್ಲ: ಅಮಿತ್ ಶಾ 

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 8:32 IST
Last Updated 2 ಏಪ್ರಿಲ್ 2019, 8:32 IST
   

ನವದೆಹಲಿ: ನಾವು ರಾಬರ್ಟ್ ವಾದ್ರಾನನ್ನು ಜೈಲಿಗೆ ಹಾಕ್ತೀವಿ ಎಂದು ಯಾವತ್ತೂ ಹೇಳಲಿಲ್ಲ.ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹಾಕುತ್ತೇವೆ ಎಂದು ಹೇಳಿದ್ದೆವು.ರಾಬರ್ಟ್ ವಾದ್ರಾ ವಿಪರೀತ ಮಟ್ಟದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದೂ ನಾವು ಹೇಳಿದ್ದೆವು.ಈ ಎರಡೂ ಹೇಳಿಕೆಗಳಿಗೆ ಪರಸ್ಪರ ಸಂಬಂಧ ಕಲ್ಪಿಸಿಕೊಳ್ಳಬಾರದು ಎಂದು ಅಮಿತ್ ಶಾ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರ ಮೇಲೆ ಭ್ರಷ್ಟಾಚಾರದ ಆರೋಪವಿದ್ದರೂ, ಅವರನ್ನು ಸರ್ಕಾರ ಯಾಕೆ ಜೈಲಿಗೆ ಹಾಕಿಲ್ಲ? ಎಂಬ ಪ್ರಶ್ನೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಈ ರೀತಿ ಉತ್ತರಿಸಿದ್ದಾರೆ.

ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ನಮ್ಮ ಪಕ್ಷ ವಾದ್ರಾ ಅವರನ್ನು ಭ್ರಷ್ಟಾಚಾರ ಮಾಡಿದವರು ಎಂದೇ ಪರಿಗಣಿಸುತ್ತದೆ. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹಾಕುತ್ತೇವೆ ಎಂದು ನಾವು ಭರವಸೆ ನೀಡಿದ್ದೆವು.ಆದರೆ ಇದು ವಾದ್ರಾ ಅವರಿಗೆ ಅನ್ವಯಿಸಬೇಕೆಂದಿಲ್ಲ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.