ADVERTISEMENT

ಬಾಲಿವುಡ್ ನಟ ಮುಷ್ತಾಕ್ ಖಾನ್‌ ಅಪಹರಣ: ₹2 ಲಕ್ಷ ಸುಲಿಗೆ; ದೂರು ದಾಖಲು

ಪಿಟಿಐ
Published 11 ಡಿಸೆಂಬರ್ 2024, 16:15 IST
Last Updated 11 ಡಿಸೆಂಬರ್ 2024, 16:15 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

ಬಿಜ್ನೋರ್, (ಉತ್ತರ ಪ್ರದೇಶ): ಬಾಲಿವುಡ್ ನಟ ಮುಷ್ತಾಕ್ ಖಾನ್‌ ಅವರನ್ನು ಅಪಹರಿಸಲಾಗಿದ್ದು, ಒಂದು ದಿನ ಅಪಹರಣಕಾರರ ಹಿ‌ಡಿತದಲ್ಲಿದ್ದ ನಟ ಸ್ವಯಂ ಪಾರಾಗಿದ್ದಾರೆ. ‘ವೆಲ್‌ಕಂ’, ‘ಸ್ತ್ರೀ–2’ ಚಿತ್ರಗಳಲ್ಲಿ ಮುಷ್ತಾಕ್‌ ಖಾನ್ ನಟಿಸಿದ್ದರು.

ಖಾನ್ ಅವರ ಕಾರ್ಯಕ್ರಮಗಳ ವ್ಯವಸ್ಥಾಪಕರಾಗಿರುವ ಶಿವಂ ಯಾದವ್‌ ಈ ಕುರಿತು ಬಿಜ್ನೋರ್ ಕೊಟ್ವಾಲಿ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ರಾಹುಲ್‌ ಸೈನಿ ಎಂಬುವವರು ಅ. 15ರಂದು, ಮೀರತ್‌ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿದ ಖಾನ್‌ರನ್ನು ಆಹ್ವಾನಿಸಿದ್ದು, ಮುಂಗಡವಾಗಿ ಹಣ ನೀಡಿದ್ದರು. ವಿಮಾನದ ಟಿಕೆಟ್‌ ಅನ್ನೂ ಕಳುಹಿಸಿದ್ದರು. 

ಮುಂಬೈನಿಂದ ದೆಹಲಿಗೆ ಬಂದಿಳಿದ ನಟನನ್ನು ಕಾರಿನಲ್ಲಿ ಕರೆದೊಯ್ಯಲಾಗಿದ್ದು, ಆ ಕಾರಿನಲ್ಲಿ ಇತರ ಇಬ್ಬರಿದ್ದರು. ಮಾರ್ಗದಲ್ಲಿ ಮತ್ತೊಂದು ವಾಹನಕ್ಕೆ ಹತ್ತಿಸಿದರು. ಖಾನ್‌ ಈ ಹಂತದಲ್ಲಿ ಪ್ರತಿಭಟಿಸಿದಾಗ ಜೀವ ಬೆದರಿಕೆಯನ್ನು ಒಡ್ಡಲಾಗಿತ್ತು. 

ದೂರಿನ ಪ್ರಕಾರ, ದುಷ್ಕರ್ಮಿಗಳ ಹಿಡಿತದಲ್ಲಿದ್ದ ಅವಧಿಯಲ್ಲಿ ಮೊಬೈಲ್‌ ಫೋನ್‌ ಬಳಸಿಕೊಂಡು ₹2 ಲಕ್ಷ ಸುಲಿಗೆ ಮಾಡಿದ್ದರು. ನ.21ರಂದು ನಟ ಸ್ವಯಂ ಪಾರಾಗಿದ್ದು, ಮುಂಬೈಗೆ ಮರಳಿದ್ದಾರೆ. ಪ್ರಕರಣದ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.

ವಾರದ ಹಿಂದೆ, ಹಾಸನಟ ಸುನಿಲ್‌ ಪಾಲ್ ಕೂಡ ಉತ್ತರಾಖಂಡಕ್ಕೆ ಹೋಗುವ ಮಾರ್ಗದಲ್ಲಿ ತನ್ನನ್ನು ಅಪಹರಿಸಲಾಗಿತ್ತು ಎಂದು ಪೊಲೀಸರಿಗೆ ದೂರು ನೀಡಿದ್ದರು. ₹20 ಲಕ್ಷ ನೀಡಲು ಒತ್ತಾಯಿಸಿದ್ದು, ₹8 ಲಕ್ಷ ಪಡೆದು ಬಿಡುಗಡೆ ಮಾಡಿದ್ದರು ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.