ADVERTISEMENT

ಸಂಭಲ್‌ನ ಶಾಹಿ ಜುಮಾ ಮಸೀದಿಯ ಗೋಡೆಗಳಿಗೆ ಸುಣ್ಣ ಬಳಿಯುವ ಕಾರ್ಯ ಆರಂಭ

ಪಿಟಿಐ
Published 16 ಮಾರ್ಚ್ 2025, 6:07 IST
Last Updated 16 ಮಾರ್ಚ್ 2025, 6:07 IST
<div class="paragraphs"><p>ಸಂಭಲ್ ಶಾಹಿ ಜುಮಾ ಮಸೀದಿಯ ಗೋಡೆಗಳಿಗೆ ಸುಣ್ಣ ಬಳಿಯುತ್ತಿರುವುದು</p></div>

ಸಂಭಲ್ ಶಾಹಿ ಜುಮಾ ಮಸೀದಿಯ ಗೋಡೆಗಳಿಗೆ ಸುಣ್ಣ ಬಳಿಯುತ್ತಿರುವುದು

   

– ಪಿಟಿಐ ಚಿತ್ರ

ಸಂಭಲ್: ಉತ್ತರ ಪ್ರದೇಶದ ಸಂಭಲ್‌ನ ಶಾಹಿ ಜಾಮಿಯಾ ಮಸೀದಿಯ ಹೊರಗಿನ ಗೋಡೆಗಳಿಗೆ ಸುಣ್ಣ ಬಳಿಯುವ ಕಾರ್ಯ ಭಾನುವಾರ ಆರಂಭವಾಗಿದೆ ಎಂದು ಮಸೀದಿಯ ವಕೀಲರೊಬ್ಬರು ತಿಳಿಸಿದ್ದಾರೆ.

ADVERTISEMENT

ಮಸೀದಿಗೆ ಸುಣ್ಣ ಬಳಿಯುವ ಕಾರ್ಯವನ್ನು ಒಂದು ವಾರದೊಳಗೆ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಮಾರ್ಚ್ 12 ರಂದು ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿತ್ತು.

ಹೈಕೋರ್ಟ್ ಆದೇಶದ ಬಳಿಕ,ಮಾರ್ಚ್ 13 ರಂದು ಪುರಾತತ್ವ ಇಲಾಖೆಯು ಮೌಲ್ಯಮಾಪನ ನಡೆಸಿತ್ತು.

ಸಂಭ‌ಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯ ಹೊರಗಿನ ಗೋಡೆಗಳಿಗೆ ಸುಣ್ಣ ಬಳಿಯುವ ಕಾರ್ಯ ಭಾನುವಾರ ಪ್ರಾರಂಭವಾಗಿದೆ ಎಂದು ಸಂಭಲ್ ಜಿಲ್ಲಾ ನ್ಯಾಯಾಲಯದಲ್ಲಿ ಮಸೀದಿ ಪರ ವಕೀಲ ಶಕೀಲ್ ವಾರ್ಸಿ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ 24ರಂದು ಮೊಘಲ್ ಕಾಲದ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ವೇಳೆ ಗಲಭೆ ಭುಗಿಲೆದ್ದು, ಸಂಭಲ್ ಉದ್ವಿಗ್ನಗೊಂಡಿತ್ತು. ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದರು. ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.