ADVERTISEMENT

15 ವರ್ಷ ಸಂಸತ್‌ನಲ್ಲಿ ಪಕ್ಕವೇ ಕುಳಿತಿದ್ದಾಗ ರಾಹುಲ್‌ ಪೌರತ್ವ ತಿಳಿದಿರಲಿಲ್ಲವೇ?

ಗೊತ್ತ

​ಪ್ರಜಾವಾಣಿ ವಾರ್ತೆ
Published 4 ಮೇ 2019, 5:41 IST
Last Updated 4 ಮೇ 2019, 5:41 IST
   

ನವದೆಹಲಿ: ರಾಹುಲ್‌ ಗಾಂಧಿ ಅವರು 15 ವರ್ಷಗಳಿಂದ ಈ ದೇಶದ ಸಂಸದರು. 15 ವರ್ಷ ರಾಹುಲ್‌ ಪಕ್ಕದಲ್ಲೇ ಕುಳಿತವರು ಅವರ ಪೌರತ್ವದ ಈಗ ಎಚ್ಚರವಾಗಿದ್ದೇಕೆ ಎಂದು ಸಾಗರೋತ್ತರ ಕಾಂಗ್ರೆಸ್‌ ಘಟಕದ ಮುಖ್ಯಸ್ಥ ಸ್ಯಾಮ್‌ ಪಿತ್ರೋಡಾ ಅವರು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.

ದೇಶದಲ್ಲಿ ಲೋಕಸಭೆ ಚುನಾವಣೆಗಳು ನಡೆಯುತ್ತಿರುವಾಗಲೇ ಮುನ್ನೆಲೆಗೆ ಬಂದಿರುವ ರಾಹುಲ್‌ ಗಾಂಧಿ ಅವರ ಪೌರತ್ವ ವಿವಾದದ ಕುರಿತು ಕಿಡಿ ಕಾರಿರುವ ಪಿತ್ರೋಡಾ, ‘15 ವರ್ಷಗಳಿಂದ ರಾಹುಲ್‌ ಗಾಂಧಿ ಅವರು ಸಂಸತ್‌ಗೆ ಆಯ್ಕೆಯಾಗುತ್ತಿದ್ದಾರೆ. ನೀವು ಅವರ ಪಕ್ಕದಲ್ಲೇ ಕುಳಿತಿದ್ದಿರಿ. ನೀವು ಅವರ ಜತೆಗೇ ಸಂಸತ್‌ನಲ್ಲಿ ಕಾರ್ಯನಿರ್ವಹಿಸಿದ್ದೀರಿ. ಆದರೆ, ಅವರ ಪೌರತ್ವದ ಬಗ್ಗೆ ನಿಮಗೆ ಈಗ ಎಚ್ಚರವಾಯಿತೇ? ಜನ ಮೂರ್ಖರೆಂದು ನೀವು ಭಾವಿಸಿದ್ದೀರಾ? ಭಾರತೀಯರ ಬುದ್ಧಿವಂತಿಕೆಯನ್ನು ಕಡೆಗಣಿಸಬೇಡಿ,’ ಎಂದು ಅವರು ಎಚ್ಚರಿಸಿದ್ದಾರೆ.

ಕಾಂಗ್ರೆಸ್‌ಗೆ ಅಧಿಕಾರ ಸಿಗಲಿದೆಯೇ ಎಂಬ ಪ್ರಶ್ನೆ ಪ್ರತಿಕ್ರಿಯೆ ನೀಡಿರುವ ಅವರು, ‘ ನಮ್ಮ ಲೆಕ್ಕಾಚಾರಗಳ ಪ್ರಕಾರ ನಾವು ಈ ಬಾರಿ ಗೆಲ್ಲುತ್ತೇವೆ. ಯಾಕೆಂದರೆ, ಮಾಧ್ಯಮಗಳಲ್ಲಿ ತೋರಿಸುತ್ತಿರುವುದಕ್ಕಿಂತಲೂ ವಾಸ್ತವ ಭಿನ್ನವಾಗಿದೆ. ಹೀಗಾಗಿಯೇ ನಾವು ಗೆಲ್ಲವು ವಿಶ್ವಾಸವಿದೆ. ಮೋದಿ ಸರ್ಕಾರ ಏನೂ ಮಾಡಿಲ್ಲ ಎಂಬುದು ಜನರಿಗೆ ತಿಳಿದಿದೆ,‘ ಎಂದು ಅವರು ಹೇಳಿದ್ದಾರೆ.

ADVERTISEMENT

ಇನ್ನು ಪ್ರಧಾನಿ ಹುದ್ದಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಇತರ ಪಕ್ಷಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿದೆಯೇ ಎಂಬುದರ ಕುರಿತು ಪ್ರತಿಕ್ರಿಯಿಸಿದ ಪಿತ್ರೋಡಾ ‘ ಇತರೆಲ್ಲ ಪಕ್ಷಗಳೂ ಸರಿಯಾದ ಸಮಯಕ್ಕೆ ಬಂದು ನಮ್ಮನ್ನು ಸೇರಿಕೊಳ್ಳಲಿವೆ. ಎಲ್ಲರದ್ದೂ ಒಂದೇ ಗುರಿ. ಪ್ರಜಾಪ್ರಭುತ್ವ ಉಳಿಯಬೇಕು ಎಂಬುದಷ್ಟೇ ಎಲ್ಲರ ಉದ್ದೇಶ,’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.