ADVERTISEMENT

ಸಾರ್ವಜನಿಕ ಆಸ್ತಿ ಹಾನಿ: ಕೇಜ್ರಿವಾಲ್ ಹೆಸರು ಹೈಲೈಟ್ ಮಾಡುತ್ತಿರುವುದೇಕೇ? –ಎಎಪಿ

ಪಿಟಿಐ
Published 12 ಮಾರ್ಚ್ 2025, 6:01 IST
Last Updated 12 ಮಾರ್ಚ್ 2025, 6:01 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ಸಾರ್ವಜನಿಕ ಆಸ್ತಿ ಹಾನಿ ಪ್ರಕರಣಗಳಲ್ಲಿ ಹಲವು ರಾಜಕಾರಣಿಗಳ ಹೆಸರು ಕೇಳಿಬಂದಿದ್ದರೂ, ಅರವಿಂದ ಕೇಜ್ರಿವಾಲ್ ಅವರ ಹೆಸರನ್ನೇ ಹೈಲೈಟ್‌ ಮಾಡುತ್ತಿರುವುದು ಏಕೆ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಪ್ರಶ್ನಿಸಿದೆ.

ಸಾರ್ವಜನಿಕ ಆಸ್ತಿ ಹಾನಿ ಪ್ರಕರಣಕ್ಕೆ ಸಂಬಂಧ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್‌ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ನಗರದ ನ್ಯಾಯಾಲಯ ದೆಹಲಿ ಪೊಲೀಸರಿಗೆ ಮಂಗಳವಾರ ನಿರ್ದೇಶನ ನೀಡಿದೆ.

ಪ್ರಚಾರಕ್ಕಾಗಿ ಸಾರ್ವಜನಿಕರ ಹಣ ದುರುಪಯೋಗಪಡಿಸಿಕೊಂಡ ಆರೋಪ ಕೇಜ್ರಿವಾಲ್‌ ಅವರ ಮೇಲಿದೆ.

ADVERTISEMENT

'ಈ ಸಂಬಂಧ ದಾಖಲಾಗಿರುವ ಮೂಲ ದೂರಿನಲ್ಲಿ ಬಿಜೆಪಿಯವರೂ ಸೇರಿದಂತೆ ಹಲವರ ಹೆಸರುಗಳಿವೆ. ಆದರೆ, ಮಾಧ್ಯಮಗಳು ಕೇಜ್ರಿವಾಲ್‌ ವಿರುದ್ಧದ ಪ್ರಕರಣವನ್ನೇ ಪ್ರಧಾನವಾಗಿಸುತ್ತಿರುವುದು ವಿಚಿತ್ರವಾಗಿದೆ' ಎಂದು ಎಎಪಿ ಹೇಳಿದೆ.

ಕೇಜ್ರಿವಾಲ್, ಎಎಪಿಯ ಮಾಜಿ ಶಾಸಕ ಗುಲಾಬ್‌ ಸಿಂಗ್‌, ದ್ವಾರಕಾ ಕೌನ್ಸಿಲರ್‌ ಆಗಿದ್ದ ನಿತಿಕಾ ಶರ್ಮಾ ಅವರು ದೊಡ್ಡ ದೊಡ್ಡ ಹೋರ್ಡಿಂಗ್‌ಗಳನ್ನು ಅಳವಡಿಸಲು ಸಾರ್ವಜನಿಕರ ಹಣ ಬಳಿಸಿಕೊಂಡಿದ್ದಾರೆ ಎಂಬ ಆರೋಪ 2019ರಲ್ಲಿ ಕೇಳಿ ಬಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಎಲ್ಲರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.